ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿ ಸಾಧ್ಯತೆ !

ಚಿತ್ರದುರ್ಗ : ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಒಳಹರಿವು ಮುಂದುವರೆದಿದ್ದು, ನವೆಂಬರ್ 19 ರಂದು ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದ ವೇಳೆ 462 ಕ್ಯೂಸೆಕ್ ನೀರು ಬಂದಿದೆ. 135 ಅಡಿ ಎತ್ತರದ ವಿವಿ ಸಾಗರ ಜಲಾಶಯ 130 ಅಡಿ ಎತ್ತರಕ್ಕೆ ನೀರು ಬಂದಾಗ ಕೋಡಿಯಲ್ಲಿ ನೀರು ಹರಿಯುತ್ತದೆ. ಸದ್ಯ ಜಲಾಶಯದಲ್ಲಿ 128.15 ಅಡಿವರೆಗೆ ನೀರು ಬಂದಿದೆ. 30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಇಂದಿಗೆ 28.86 ಟಿಎಂಸಿ ಅಡಿ ನೀರು ಬಂದಿದೆ. ಇನ್ನೂ ಕೇವಲ 1.14 ಟಿಎಂಸಿ ನೀರು ಬಂದರೆ ಜಲಾಶಯದ ಕೋಡಿಯಲ್ಲಿ ನೀರು ಹರಿಯಲಿದೆ. ಭದ್ರಾ ಜಲಾಶಯದಿಂದ ಇನ್ನೊಂದು ಟಿಎಂಸಿ ನೀರು ಹರಿಯುವ ಸಾಧ್ಯತೆ ಇದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ಜಲಾಶಯ ಕೋಡಿ ಬೀಳಬಹುದು ಎಂದು ಅಂದಾಜಿಸಲಾಗಿದೆ.

Edited By : PublicNext Desk
PublicNext

PublicNext

19/11/2024 06:24 pm

Cinque Terre

11.62 K

Cinque Terre

0

ಸಂಬಂಧಿತ ಸುದ್ದಿ