ಚಿತ್ರದುರ್ಗ: ಪಾದಯಾತ್ರೆಗೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇನ್ನೂ ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ.
ಸಾಗರ ವಿಧಾನಸಭಾ ಕ್ಷೇತ್ರದಿಂದ ಪಾದಯಾತ್ರೆಗೆ ಕೈ ಕಾರ್ಯಕರ್ತ ಆಗಮಿಸಿದ್ದ.ಆಗ ಅಪಘಾತ ಸಂಭವಿಸಿದ್ದು, ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಪಾದಯಾತ್ರೆಗೆ ಜನರನ್ನ ಮೂಡುಗೆರೆಯಿಂದ ಕರೆತಂದಿದ್ದ ಬಸ್ ಹಿರಿಯೂರು ನಗರದ ಕೋರ್ಟ್ ಸಮೀಪದಲ್ಲಿ ಡಿಕ್ಕಿಯಾಗಿದೆ. ಘಟನೆ ಹಿರಿಯೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,ಮೃತ ದುರ್ದೈವಿ ರಮೇಶ್, ಶಿವಮೂರ್ತಿ ಸಾಗರ ಮೂಲದ ವ್ಯಕ್ತಿ ಎಂಬುದು ತಿಳಿದು ಬಂದಿದೆ.ರಸ್ತೆ ದಾಟುವ ವೇಳೆ ಖಾಸಗಿ ಬಸ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.
PublicNext
10/10/2022 11:01 pm