ಚಿತ್ರದುರ್ಗ: ವಕ್ಫ್ ಆಸ್ತಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಚಳ್ಳಕೆರೆ ನಗರದಲ್ಲಿ ಕೂಡಾ ನಮ್ಮ ಸಮುದಾಯದ ಭೂಮಿಗೂ ವಕ್ಫ್ ನೋಟಿಸ್ ನೀಡಿದ್ದಾರೆ. ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಕೂಡಾ ಹಲವರಿಗೆ ವಕ್ಫ್ ನೋಟಿಸ್ ನೀಡಿದ್ದಾರೆ. ತಲೆ ತಲಾಂತರದಿಂದ ಅನುಭವಿಸಿಕೊಂಡು ಬಂದ ಆಸ್ತಿಯನ್ನ, ದಿಢೀರ್ ಅಂತ ನೋಟಿಸ್ ನೀಡಿ, ವಕ್ಫ್ ನಮ್ಮದು ಅಂದ್ರೆ, ಒಪ್ಪೋದಕ್ಕೆ ಆಗಲ್ಲ. ಹಾಗಾಗಿ ರಾಜ್ಯ ಸರ್ಕಾರ ಕಾನೂನಾತ್ಮಕ ಪರಿಹಾರ ನೀಡಬೇಕು ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ
PublicNext
04/11/2024 08:10 am