ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದಲ್ಲಿ ವಿಜಯ ದಶಮಿ (05-10-22)ಯಂದು ಶ್ರೀಮಠದ ರಾಜಾಂಗಣದಲ್ಲಿ ರಾತ್ರಿ ವೇಳೆ ಸುಮಾರು 45 ಕ್ಕೂ ಹೆಚ್ಚು ಫೋಟೋಗಳನ್ನು ಕಳವು ಮಾಡಲಾಗಿದೆ. ಹೌದು ಡಾ. ಶಿವಮೂರ್ತಿ ಮುರುಘಾ ಶರಣರ ಜೊತೆಯಲ್ಲಿದ್ದ ಗಣ್ಯ ವ್ಯಕ್ತಿಗಳ ಫೋಟೋಗಳನ್ನು ಕಳವು ಮಾಡಲಾಗಿದೆ ಅಂತ ಹಾಲಿ ಶ್ರೀಮಠದ ಆಡಳಿತಾಧಿಕಾರಿ ವಸ್ತದ್ ಮಠರವರು ನೀಡಿದ ದೂರಿನನ್ವಯ ಚಿತ್ರದುರ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ ಅಂತ ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ
ಇನ್ನು ಲೈಂಗಿಕ ಕಿರುಕುಳ ಅರೋಪ ಹಿನ್ನೆಲೆಯಲ್ಲಿ ಜೈಲು ಸೇರಿದ ನಂತರ ಒಂದು ಕಡೆ ಮಠಕ್ಕೆ ಪೀಠಾದ್ಯಕ್ಷರ ಬದಲಾವಣೆ ಆಗಬೇಕು ಅಂತ ಒತ್ತಡ ಹೆಚ್ಚುತ್ತಿದೆ. ಇತ್ತ ಮುರುಘಾ ಶ್ರೀಗಳ ಮಹತ್ವದ ಪೋಟೋಗಳ ಕಳವು ಸ್ಥಳೀಯ ಜನರಲ್ಲಿ ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ.
PublicNext
08/10/2022 02:56 pm