ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಪೊಲೀಸ್ ಇಲಾಖೆಯಿಂದ ಸೈಬರ್ ಕ್ರೈಂ ಅಪರಾಧ ತಡೆ ಮಾಸಾಚರಣೆ

ಮೊಳಕಾಲ್ಮುರು:ಪಟ್ಟಣದ ಜ್ಯೂನಿಯ‌ರ್ ಕಾಲೇಜಿನಲ್ಲಿ ಮಂಗಳವಾರ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಸೈಬರ್ ಕ್ರೈಂ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಿಪಿಐ ವಸಂತ ಅಸೋದೆ ಮಾತನಾಡಿ,ಶಾಲಾ ಕಾಲೇಜು ವಿದ್ಯಾರ್ಥಿಗಳು ಅನುಮಾನಾಸ್ಪದ ವ್ಯಕ್ತಿಗಳ ಜತೆ ಮಾತನಾಡಬಾರದು, ಅವರು ನೀಡುವ ಆಮಿಷಗಳನ್ನು ಬಹಿಷ್ಕರಿಸಬೇಕು. ಮನೆ ಪಾಠಗಳಿಗೆ ತೆರಳುವಾಗ ಒಂಟಿಯಾಗಿ ತೆರಳದೆ ಸ್ನೇಹಿತರ ಜತೆಯಲ್ಲಿ ಹೋಗಿ ಬರುವುದು ಒಳಿತು ಎಂದರು.

ಆಭರಣಗಳನ್ನು ಪ್ರದರ್ಶಿಸುವುದರಿಂದಲೂ ಅಪರಾಧಗಳು ನಡೆಯುತ್ತವೆ ಆದ್ದರಿಂದ ಆಭರಣಗಳನ್ನು ಮನೆಯಲ್ಲಿ ಭದ್ರವಾಗಿಟ್ಟು ರಸ್ತೆಯಲ್ಲಿ ಸಂಚರಿಸಬೇಕು. ಬಂಗಾರ ಆಭರಣಗಳಿಗೆ ಪಾಲೀಷ್ ನೀಡಲಾಗುತ್ತದೆ ಎಂದು ತಿಳಿಸುತ್ತಾ ಆಗಮಿಸುವ ವ್ಯಕ್ತಿಗಳನ್ನು ನಂಬಬಾರದು, ಅಪರಿಚಿತರಿಗೆ ಎಟಿಎಂ ನೀಡುವುದರಿಂದಲೂ ಅಪರಾಧಗಳು ನಡೆಯುತ್ತವೆ ಎಂದರು!

ಪಿಎಸ್‌ಐ ಜಿ.ಪಾಂಡುರಂಗ ಮಾತನಾಡಿ. ಮನೆಗಳಿಗೆ ಹಾಕಿರುವ ಬೀಗಗಳನ್ನು ಮತ್ತೊಮ್ಮೆ ಪರೀಕ್ಷಿಸಿ ಹೊರ ನಡೆಯಬೇಕು. ಅನಾಮಧೇಯರು ಮೊಬೈಲ್ ಮೂಲಕ ಕರೆ ಮಾಡಿ ಎಟಿಎಂ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಕೇಳಿದಲ್ಲಿ ಯಾವುದೇ ಕಾರಣಕ್ಕೂ ನೀಡಬಾರದು. ದಿನ ಪತ್ರಿಕೆಗಳಲ್ಲಿ ಬರುವ ಅಪರಾಧ ಸುದ್ದಿಗಳನ್ನು ಗಮನಿಸಿ ಜಾಗತೆ ವಹಿಸುವುದರಿಂದ ಅಪರಾಧಗಳನ್ನು ತಡೆಗಟ್ಟಬಹುದು ಎಂದರು.

Edited By : PublicNext Desk
Kshetra Samachara

Kshetra Samachara

10/12/2024 07:59 pm

Cinque Terre

760

Cinque Terre

1

ಸಂಬಂಧಿತ ಸುದ್ದಿ