ಚಿಕ್ಕಮಗಳೂರು: ಇಂದು ಎಲ್ಲರೂ ಉತ್ತಮ ಮನೆಗಳಲ್ಲಿ ವಾಸವಿದ್ದು ಆರ್ಥಿಕವಾಗಿಯೂ ಸಬಲರಾಗಿದ್ದಾರೆ. ಶಾಂತಿ ನೆಮ್ಮದಿಗಾಗಿ ದೇವಾಲಯಗಳ ಅವಶ್ಯಕತೆಯಿದೆ ಎಂದು ಚಿಕ್ಕಮಗಳೂರಿನ ಬಸವ ತತ್ವದ ಪೀಠದ ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಗಳು ಹೇಳಿದರು.
ಸಖರಾಯಪಟ್ಟಣದ ಹೊರಪೇಟೆ ಬಡಾವಣೆಯಲ್ಲಿ ಶ್ರೀಬಸವೇಶ್ವರ ದೇವಾಲಯಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಇಂದು ದೇವಾಲಯಗಳು ಮನಸ್ಸುಗಳನ್ನು ಬೆಸೆಯುವ ತಾಣಗಳಾಗಬೇಕು ದೇವಾಲಯಗಳು ಮನಸ್ಸುಗಳನ್ನು ಒಂದು ಗೂಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರು ಉತ್ತಮ ದೇವಾಲಯ ನಿರ್ಮಿಸಲು ಮನಸ್ಸು ಮಾಡಿದ್ದಾರೆ. ಅದರ ನಿರ್ವಹಣೆಯೂ ನಿಮ್ಮದೇ ಜವಾಬ್ದಾರಿ ಎಂದರು. ಪ್ರಾಸ್ತಾವಿಕವಾಗಿ ದೇವಾಲಯ ಸಮಿತಿಯ ಮಹಡಿಮನೆ ಸತೀಶ್ ಮಾತನಾಡಿ, ಈ ಪುರಾತನ ದೇವಾಲಯ ಶಿಥಿಲಗೊಂಡಿತ್ತು. ಅದನ್ನು ಮರು ನಿರ್ಮಾಣ ಮಾಡಲು ಸುಮಾರು ಒಂದುವರೆ ಕೋಟಿ ಅಂದಾಜಿದೆ. ಸರಕಾರದಿಂದ ಅನುದಾನವು ಸ್ವಲ್ಪ ಮಟ್ಟಿಗೆ ದೊರೆತಿದೆ. ಗ್ರಾಮಸ್ಥರೆಲ್ಲರೂ ಸೇರಿ ಹಣವನ್ನು ಕ್ರೊಢೀಕರಿಸಿ ದೇವಾಲಯದ ಜೊತೆಗೆ ಉತ್ತಮ ಪರಿಸರದೊಂದಿಗೆ ನಿರ್ಮಿಸಲು ಎಲ್ಲರೂ ಸಹಕರಿಸುತ್ತಾರೆ ಎಂದರು.
Kshetra Samachara
03/11/2024 07:53 pm