ಚಿಕ್ಕಮಗಳೂರು : ದಿ. ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಯವರು ಸಾಮಾಜಿಕ ಕಳಕಳಿ ಹೊಂದಿದ್ದ ದಕ್ಷ ಅಧಿಕಾರಿ ಎಂದು ಎಸ್ಪಿ ವಿಕ್ರಂ ಅಮಟೆ ಹೇಳಿದ್ರು.
ಯುವ ಬಳಗದ ವತಿಯಿಂದ ದಿ.ಮಧುಕರ್ ಶೆಟ್ಟಿ ಅವರ 6ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಧುಕರ್ ಶೆಟ್ಟಿಯವರು ಬಹಳ ಸರಳ ಸಜ್ಜನಿಕೆಯ ವ್ಯಕ್ತಿ, ಅವರೊಡನೆ ಕೆಲಸ ಮಾಡಿರುವುದು ನನ್ನ ಪುಣ್ಯ, ಇಂತಹ ಅಪರೂಪದ ಅಧಿಕಾರಿಗಳು ಇಲಾಖೆಗೆ ಬೇಕು ಎಂದರು.
ಯಾವುದೇ ಒಂದು ವ್ಯಕ್ತಿ ಅಥವಾ ವಸ್ತುವಿನ ಬೆಲೆ ಅದನ್ನು ಕಳೆದುಕೊಂಡಾಗಲೇ ಗೊತ್ತಾಗುವುದು, ಮಧುಕರ್ ಶೆಟ್ಟಿಯವರು ಬಹಳ ಪ್ರಾಮಾಣಿಕ ಅಧಿಕಾರಿಯಾಗಿದ್ದರು, ಬಡವರು ನಿರ್ಗತಿಕರ ಮೇಲೆ ಅಪಾರ ಕಾಳಜಿಯನ್ನು ಅವರು ಹೊಂದಿದ್ದರು ಮುಂದಿನ ದಿನಗಳಲ್ಲಿ ಅವರನ್ನು ಸ್ಮರಿಸಿ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ನಗರದಲ್ಲಿ ಆಯೋಜಿಸಲಾಗುವುದು ಎಂದರು.
Kshetra Samachara
30/12/2024 08:09 pm