ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೃಂಗೇರಿ: ಕನ್ನಡ ಭಾಷೆ ಬಗ್ಗೆ ಅಭಿಮಾನ ಇದ್ದರೆ ಸಾಲದು, ಅದನ್ನು ಬೆಳೆಸುವ ನೈಜ ಕಾಳಜಿ ನಮ್ಮಲ್ಲಿರಬೇಕು - ಶೃಂಗೇರಿ ಸುಬ್ಬಣ್ಣ

ಶೃಂಗೇರಿ : ಕನ್ನಡ ಭಾಷೆ ಬಗ್ಗೆ ಅಭಿಮಾನ ಇದ್ದರೆ ಸಾಲದು, ಅದನ್ನು ಬೆಳೆಸುವ ನೈಜ ಕಾಳಜಿ ನಮ್ಮಲ್ಲಿರಬೇಕು, ಕನ್ನಡದ ಪುಸ್ತಕವನ್ನು ಕೊಂಡು ಓದುವ ಹವ್ಯಾಸ ಬೆಳಸಿಕೊಂಡು ಮಕ್ಕಳಿಗೆ ಕನ್ನಡದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ ಹೇಳಿದರು. ನೇರಳಕೊಡಿಗೆ ಏರ್ಪಡಿಸಿದ್ದ ನುಡಿ ನಿತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು

ಕನ್ನಡದ ಬೆಳವಣಿಗೆ ಮತ್ತು ಜಾಗೃತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್‌ನಿಂದ ನವೆಂಬರ್ ತಿಂಗಳಿಡಿ ತಾಲೂಕಿನಾದ್ಯಂತ ಕನ್ನಡ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದರು. ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲ ಆನಂದಸ್ವಾಮಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆ ನ.1 ಕ್ಕೆ ಸೀಮಿತವಾಗಬಾರದು. ರಾಜ್ಯೋತ್ಸವ ಮಾತ್ರವಲ್ಲದೇ ಸಾಹಿತ್ಯ ಪರಿಷತ್ ತಿಂಗಳಿಡಿ ವಿವಿಧ ಕಾರ್ಯಕ್ರಮ ಆಯೋಜಿಸಿದೆ ಎಂದರು.

Edited By : PublicNext Desk
Kshetra Samachara

Kshetra Samachara

03/11/2024 07:23 pm

Cinque Terre

920

Cinque Terre

0

ಸಂಬಂಧಿತ ಸುದ್ದಿ