ಹೈದರಾಬಾದ್: ಹೈದರಾಬಾದ್‌ನ ಅತ್ಯಂತ ಜನಪ್ರಿಯ ಬಾಲಾಪುರ ಗಣೇಶನ 21 ಕೆಜಿಯ ಲಡ್ಡು 24 ಲಕ್ಷ 60 ಸಾವಿರ ರೂ.ಗೆ ಹರಾಜು ಆಗಿದೆ.
ಶುಕ್ರವಾರ ಬೆಳಗ್ಗೆ ಆರಂಭವಾದ ಹರಾಜಿನಲ್ಲಿ ಲಡ್ಡು ಟಿಆರ್‌ಎಸ್ ನಾಯಕ ವಿ ಲಕ್ಷ್ಮಾ ರೆಡ್ಡಿ ಪಾಲಾಯಿತು. ಪ್ರತಿ ವರ್ಷ ಗಣೇಶ ಮೂರ್ತಿ ವಿಸರ್ಜನೆಯ ಅಂತಿಮ ದಿನದಂದು ಹರಾಜು ನಡೆಯುತ್ತದೆ. ಕಳೆದ ವರ್ಷ ಲಡ್ಡು 18.90 ಲಕ್ಷ ರೂ.ಗೆ ಆಂಧ್ರಪ್ರದೇಶದ ಕಡಪಾದಿಂದ ವೈಎಸ್ಆರ್ ಕಾಂಗ್ರೆಸ್ ಎಂಎಲ್‌ಸಿ ಆರ್ವಿ ರಮೇಶ್ ಯಾದವ್ ಮತ್ತು ಅವರ ಪಾಲುದಾರ ಮರ್ರಿ ಶಶಾಂಕ್ ರೆಡ್ಡಿ ಅವರು ಹರಾಜನ್ನು ಗೆದ್ದಿದ್ದರು.
ಈ ಬಾರಿ 29ನೇ ವರ್ಷಕ್ಕೆ ಲಡ್ಡು ಹರಾಜು ಎಂದು ವರದಿಗಳು ತಿಳಿಸಿವೆ. 1994ರಲ್ಲಿ ಲಡ್ಡು 450 ರೂ.ಗೆ ಹರಾಜಾಗಿತ್ತು ಎನ್ನಲಾಗಿದೆ.
PublicNext
09/09/2022 04:22 pm