ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಝೆಪ್ಟೋ' ಸಂಸ್ಥೆ ವಿಷಮಯ ವಾತಾವರಣ ಹೊಂದಿದೆ - ಉದ್ಯೋಗಿ ಆಕ್ರೋಶ

ಮುಂಬೈ: ಆನ್‌ಲೈನ್ ಟ್ರೇಡಿಂಗ್ ಕಂಪನಿ ಝೆಪ್ಟೋ ವಿರುದ್ಧ ಸಂಸ್ಥೆಯ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಸಂಸ್ಥೆಯಲ್ಲಿ ಉಸಿರುಗಟ್ಟಿಸುವ ವಿಷಮಯ ವಾತಾವರಣ ಇದೆ‌. ಸಹಿಸಲು ಅಸಾಧ್ಯ ಎನ್ನುವಷ್ಟು ಕೆಲಸದ ಒತ್ತಡವಿದೆ ಎಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ರೆಡ್ ಇಟ್ ನಲ್ಲಿ ಪೋಸ್ಟ್ ಮಾಡಿರುವ ಸಂಸ್ಥೆಯ ಉದ್ಯೋಗಿಯೊಬ್ಬರು ಸಿ‌ಇಒ ಆದಿತ್ ಪಲಿಚಾ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ಮೀಟಿಂಗ್ ಹಾಜರಾಗಲು ತಾಕೀತು ಮಾಡುತ್ತಾರೆ. ವಾರಕ್ಕೆ ಕನಿಷ್ಟ 10 ಜನ ಉದ್ಯೋಗಿಗಳು ಕೆಲಸ ತೊರೆದು ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ‌.

ಈ ಪೋಸ್ಟ್ ವೈರಲ್ ಆಗುತ್ತಿದ್ದು ಸ್ಟಾರ್ಟ್‌ಅಪ್ ಆಸಕ್ತರು ಗಹನವಾಗಿ ಚರ್ಚೆ ಮಾಡುತ್ತಿದ್ದಾರೆ. ಝೆಪ್ಟೋ ಒಂದು ಆನ್‌ಲೈನ್ ಡೆಲಿವರಿ ಕಂಪನಿಯಾಗಿದ್ದು ದಿನಸಿ ಸಾಮಗ್ರಿ, ತರಕಾರಿ, ಹಣ್ಣು ಹಾಗೂ ಇತರ ಗೃಹೋಪಯೋಗಿ ವಸ್ತುಗಳನ್ನು ಹೋಮ್ ಡೆಲಿವರಿ ನೀಡುತ್ತದೆ.

Edited By : Nagaraj Tulugeri
PublicNext

PublicNext

04/12/2024 10:39 pm

Cinque Terre

18 K

Cinque Terre

0

ಸಂಬಂಧಿತ ಸುದ್ದಿ