ನವದೆಹಲಿ: ಏರ್‌ಹೆಲ್ಪ್ ಸ್ಕೋರ್ 2024ರ ವರದಿ ನೀಡಿರುವ ವಿಶ್ವದ ಅತ್ಯುತ್ತಮ ವಿಮಾನ ಪ್ರಯಾಣ ಹಾಗೂ ಅತಿ ಕೆಟ್ಟ ವಿಮಾನ ಪ್ರಯಾಣಗಳ ಪಟ್ಟಿ ಇದೀಗ ಬಿಡುಗಡೆಯಾಗಿದೆ. ಆದರೆ ಈ ಪಟ್ಟಿಯಲ್ಲಿ ಭಾರತದ ಅತಿದೊಡ್ಡ ವಿಮಾಯಾನ ಸಂಸ್ಥೆ ಇಂಡಿಗೋ ಅತ್ಯಂತ ಕಳಪೆ ಅಂಕ ಪಡೆದಿದೆ.
ಗ್ರಾಹಕ ಸೇವೆ, ಆರಾಮದಾಯಕ ಪ್ರಯಾಣ, ತಕ್ಕ ಸಮಯದಲ್ಲಿ ಆಗಮನ ಹಾಗೂ ನಿರ್ಗಮನ, ವಿಮಾನದಲ್ಲಿ ನೀಡುವ ಆಹಾರ, ವಿಮಾನದ ಕಾರ್ಯನಿರ್ವಹಣೆ, ಶುಚಿತ್ವ, ಪ್ರಕರಣ, ಪ್ರಯಾಣಿಕರು ನೀಡಿದ ಅಭಿಪ್ರಾಯ ಸೇರಿದಂತೆ ಹಲವು ಕಾರಣಗಳನ್ನು ಆಧಾರವಾಗಿಟ್ಟುಕೊಂಡು ಏರ್‌ಹೆಲ್ ಸ್ಕೋರ್ 2024ರ ಪಟ್ಟಿ ಬಿಡುಗಡೆ ಮಾಡಿದೆ. 109 ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಇಂಡಿಗೋ 103ನೇ ಸ್ಥಾನದಲ್ಲಿದೆ.
ಏರ್‌ಹೆಲ್ಪ್ 2024ರ ವರದಿ ಪ್ರಕಾರ ಬೆಲ್ಜಿಯಂ ಬ್ರೂಸೆಲ್ಸ್ ಏರ್‌ಲೈನ್ಸ್ ನಂಬರ್ 1 ಸ್ಥಾನ ಪಡೆದಿದೆ. ಬ್ರೂಸೆಲ್ಸ್ ಏರ್‌ಲೈನ್ಸ್ ಅತ್ಯುತ್ತಮ ಪ್ರಯಾಣ ಅನುಭವ ನೀಡಲಿದೆ ಎಂದು ವರದಿ ಮಾಡಿದೆ.
ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆಗಳು
* ಬ್ರೂಸೆಲ್ಸ್ ಏರ್‌ಲೈನ್ಸ್
* ಕತಾರ್ ಏರ್‌ವೇಸ್
* ಯುನೈಟೆಡ್ ಏರ್‌ಲೈನ್ಸ್
* ಅಮೇರಿಕನ್ ಏರ್‌ಲೈನ್ಸ್
* ಪ್ಲೇ (ಐಸ್ಲ್ಯಾಂಡ್)
* ಆಸ್ಟ್ರಿಯನ್ ಏರ್‌ಲೈನ್ಸ್
* LOT ಪೋಲಿಷ್ ಏರ್‌ಲೈನ್ಸ್
* ಏರ್ ಅರೇಬಿಯಾ
* ವೈಡರೀ
* ಏರ್ ಸರ್ಬಿಯಾ
2024ರ ಕೆಟ್ಟ ಏರ್‌ಲೈನ್ಸ್
* ಸ್ಕೈ ಎಕ್ಸ್‌ಪ್ರೆಸ್
* ಏರ್ ಮಾರಿಷಸ್
* ತಾರೋಮ್
* ಇಂಡಿಗೋ
* ಪೆಗಾಸಸ್ ಏರ್ಲೈನ್ಸ್
* ಎಲ್ ಅಲ್ ಇಸ್ರೇಲ್ ಏರ್ಲೈನ್ಸ್
* ಬಲ್ಗೇರಿಯಾ ಏರ್
* ನೌವೆಲೇರ್
* Buzz
* ಟುನಿಸೈರ್
PublicNext
04/12/2024 07:38 pm