ಬೆಂಗಳೂರು: ಮದ್ಯ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ನಾಳೆಯಿಂದ ಎಲ್ಲೂ ಮದ್ಯ ಸಿಗೋದೇ ಇಲ್ಲ. ಇದನ್ನ ನಾವ್ ಹೇಳ್ತಿಲ್ಲ. ಮದ್ಯ ಮಾರಾಟಗಾರರ ರಾಜ್ಯ ಘಟಕದ ಅಧ್ಯಕ್ಷ ಎಸ್. ಗುರುಸ್ವಾಮಿ ಹೇಳಿದ್ದಾರೆ.
ಏಪ್ರಿಲ್-1 ರಿಂದಲೇ ಮದ್ಯ ಮಾರಾಟದಲ್ಲಿ ಹೊಸ ಪದ್ದತಿ ಜಾರಿಗೆ ಬಂದಿದೆ. ಇದರಿಂದ ಮದ್ಯ ಖರೀದಿಯಲ್ಲಿ ಹತ್ತು ಹಲವು ಗೊಂದಲಗಳು ಶುರು ಆಗಿವೆ. ಸರಿಯಾದ ಸಮಯಕ್ಕೆ ಮದ್ಯ ಪೂರೈಕೆ ಆಗ್ತಾ ಇಲ್ಲ. ಇದರಿಂದ ಬಾರ್ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಗುರುಸ್ವಾಮಿ ವಿವರಿಸಿದ್ದಾರೆ.
ಏನ್ ಇದು ಹೊಸ ಪದ್ದತಿಯ ಗೊಂದಲ:
ಈ ಮೊದಲು KSBCL ಅಕೌಂಟ್‌ಗೆ ಹಣ ಹಾಕಿದರೆ, ನಮಗೆ ಬೇಕಾದ ಮದ್ಯ ಸುಲಭವಾಗಿಯೇ ಸಿಗುತ್ತಿತ್ತು.ಅಗ ಬಿಲ್ಲಿಂಗ್ ವ್ಯವಸ್ಥೆ ಮ್ಯಾನ್ಯುವಲ್ ಆಗಿಯೇ ಇತ್ತು.ಆದರೆ, ಏಪ್ರಿಲ್ 1 ರಿಂದ ವೆಬ್ ಇಂಡೆಂಟಿಂಗ್ ವ್ಯವಸ್ಥೆ ಜಾರಿಯಾಗಿದೆ.ಇದರಿಂದ ಹಿಂದಿನ ದಿನವೇ ಎಲ್ಲವನ್ನೂ ಪೂರ್ಣಗೊಳಿಸಬೇಕು. ಇದರಿಂದ ಸಗಟು ಮದ್ಯ ಖರೀದಿದಾರರಿಗೆ ತೊಂದರೆ ಆಗುತ್ತಿದೆ.
ಮುಂದಿನ 24 ಗಂಟೆಯಲ್ಲಿ ಇದನ್ನ ಸರಿ ಪಡಿಸದೇ ಹೋದ್ರೆ, ಮದ್ಯ ಮಾರಾಟ ನಿಲ್ಲಿಸಿ ಉಗ್ರ ಹೋರಾಟ ಮಾಡೋದಾಗಿ ಎಸ್.ಗುರುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
PublicNext
08/07/2022 07:52 pm