ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಪನಿ ಉದ್ಯೋಗಿಯಿಂದ ಅವಳಿ ಮಕ್ಕಳನ್ನು ಪಡೆದ ಇಲಾನ್ ಮಸ್ಕ್- ಮಕ್ಕಳ ಸಂಖ್ಯೆ 9ಕ್ಕೆ ಏರಿಕೆ

ಟೆಸ್ಲಾ ಖ್ಯಾತಿಯ ಉದ್ಯಮಿ ಇಲಾನ್ ಮಸ್ಕ್ ಅವರು ತಮ್ಮ ಕಂಪನಿಯ ಉದ್ಯೋಗಿಯೊಬ್ಬರಿಂದ ಅವಳಿ ಮಕ್ಕಳನ್ನು ಪಡೆದಿರುವ ಸಂಗತಿ ಈಗ ಬೆಳಕಿಗೆ ಬಂದಿದೆ. ಅವಳಿ ಮಕ್ಕಳ ಸೇರ್ಪಡೆಯಿಂದಾಗಿ ಇಲಾನ್ ಅವರ ಒಟ್ಟು ಮಕ್ಕಳ ಸಂಖ್ಯೆ 9ಕ್ಕೆ ತಲುಪಿದೆ.

ಇಲಾನ್ ಮಸ್ಕ್ ಒಡೆತನದ ಸ್ಟಾರ್ಟಪ್ ನ್ಯೂರಾಲಿಂಕ್‌ನ ಉನ್ನತ ಹುದ್ದೆಯಲ್ಲಿದ್ದ ಶಿವೊನ್ ಝಿಲಿಸ್ ಜತೆಗಿನ ಸಂಬಂಧದಿಂದ ಅವರು ಕಳೆದ ವರ್ಷ (2021)ರ ನವೆಂಬರ್‌ನಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದಾರೆ. 'ಬ್ಯುಸಿನೆಸ್ ಇನ್‌ಸೈಡರ್' ಈ ಕುರಿತು ವರದಿ ಪ್ರಕಟಿಸಿದ್ದು, ಮಸ್ಕ್ ಮತ್ತು ಝಿಲಿಸ್ ಇಬ್ಬರೂ ಮಕ್ಕಳ ಹೆಸರು ಬದಲಾವಣೆ ಕುರಿತಂತೆ ನ್ಯಾಯಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ವಿಚಾರ ಬಹಿರಂಗವಾಗಿದೆ ಎಂದು ಹೇಳಿದೆ.

ಇಲಾನ್ ಮಸ್ಕ್ ಅವರು ಕೆನಡಾದ ಗಾಯಕಿ ಗ್ರಿಮ್ಸ್ ಜತೆಗೆ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಮಾಜಿ ಪತ್ನಿ, ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ ಜತೆಗಿನ ದಾಂಪತ್ಯದಲ್ಲಿ ಐದು ಮಕ್ಕಳನ್ನು ಪಡೆದಿದ್ದು, ಝಿಲಿಸ್ ಜತೆಗಿನ ಸಂಬಂಧದಿಂದ ಅವಳಿ ಮಕ್ಕಳನ್ನು ಹೊಂದುವ ಮೂಲಕ ಸುದ್ದಿಯಾಗಿದ್ದಾರೆ.

ಶಿವೊನ್ ಝಿಲಿಸ್ ಅವರು 2017ರ ಮೇ ತಿಂಗಳಿನಲ್ಲಿ ಮಸ್ಕ್ ಒಡೆತನದ ನ್ಯೂರಾಲಿಂಕ್ ಕಂಪನಿಗೆ ಸೇರಿದ್ದು, ನಂತರದಲ್ಲಿ ಟೆಸ್ಲಾದಲ್ಲಿ ಉನ್ನತ ಹುದ್ದೆಗೆ ಏರಿದ್ದರು.

Edited By : Vijay Kumar
PublicNext

PublicNext

07/07/2022 12:17 pm

Cinque Terre

31.17 K

Cinque Terre

1

ಸಂಬಂಧಿತ ಸುದ್ದಿ