ಬೆಂಗಳೂರು:ನೋಟುಗಳ ಮೇಲೆ ಗಾಂಧಿಜಿ ಭಾವ ಚಿತ್ರಗಳನ್ನ ನಾವು ನೋಡುತ್ತಲೆ ಬೆಳೆದಿದ್ದೇವೆ. ಆದರೆ, ಈಗ ಇದೇ ನೋಟುಗಳ ಮೇಲೆ ರವೀಂದ್ರನಾಥ್ ಠಾಗೋರ್, ಎಪಿಜೆ ಅಬ್ದುಲ್ ಕಲಾಂ ಅವರ ಭಾವ ಚಿತ್ರಳನ್ನ ಹಾಕಲು ಆರ್‌ಬಿಐ ಚಿಂತನೆ ನಡೆಸಿದೆ.
ಹೌದು ಈ ಒಂದು ಚಿಂತನೆ ನಡೆದಿದೆ ಅನ್ನೋದು ವರದಿ ಆಗಿದೆ. ಈ ಕುರಿತು ಹಣಕಾಸು ಸಚಿವಾಲಯ ಹಾಗೂ ರಿಸರ್ವ್‌ಬ್ಯಾಂಕ್ ಕೆಲವು ಮುಖಬೆಲೆಯ ಹೊಸ ಸರಣಿ ನೋಟುಗಳ ಮೇಲೆ ರವೀಂದ್ರನಾಥ್ ಠಾಗೋರ್ ಮತ್ತು ಅಬ್ದುಲ್ ಕಲಾಂ ಅವರ ಭಾವ ಚಿತ್ರಗಳನ್ನ ಬಳಸುವುದನ್ನ ಪರಿಗಣಿಸುತ್ತಿದೆ.
ಮಹಾತ್ಮಾ ಗಾಂಧಿ ಹೊರತಾಗಿ ಇದೇ ಮೊದಲ ಬಾರಿಗೆ ಇತರ ಪ್ರಸಿದ್ಧ ವ್ಯಕ್ತಿಗಳ ಭಾವ ಚಿತ್ರ ಬಳಸಲು ಮುಂದಾಗಿದ್ದು, ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದ ಅಧೀನ ಸೆಕ್ಯೂರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾಗೆ ಕಳಿಸಲಾಗಿದೆ ಎಂದು ವರದಿ ಹೇಳುತ್ತಿದೆ.
PublicNext
06/06/2022 02:45 pm