ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5 ವರ್ಷಕ್ಕಾಗಿ 98 ಕೋಟಿ ರೂ.ಗೆ ಮನೆ ಬಾಡಿಗೆ ಪಡೆದ ಟಾಟಾ ಗ್ರೂಪ್‌ ಅಧ್ಯಕ್ಷ ಚಂದ್ರಶೇಖರನ್!

ಮುಂಬೈ: ಟಾಟಾ ಗ್ರೂಪ್‌ ಸಮೂಹದ ಅಧ್ಯಕ್ಷ ನಟರಾಜನ್ (ಎನ್‌) ಚಂದ್ರಶೇಖರನ್ ದುಬಾರಿ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ. ಚಂದ್ರಶೇಖರನ್ ಮತ್ತು ಅವರ ಕುಟುಂಬವು ಮುಂಬೈನ ಪೆಡ್ಡರ್ ರಸ್ತೆಯ ಐಷಾರಾಮಿ ಟವರ್‌ನಲ್ಲಿ ಡ್ಯೂಪ್ಲೆಕ್ಸ್ ಮನೆಯೊಂದನ್ನು 5 ವರ್ಷಕ್ಕಾಗಿ ಬರೋಬ್ಬರಿ 98 ಕೋಟಿ ರೂ.ಗೆ ಖರೀದಿಸಿದೆ.

ಇದೊಂದು 'ಹೈ-ಪ್ರೊಫೈಲ್' ವಹಿವಾಟು ಎಂದು ಆಸ್ತಿ ಮಾರುಕಟ್ಟೆ ವೀಕ್ಷಕರು ಬಣ್ಣಿಸಿದ್ದಾರೆ. ದಕ್ಷಿಣ ಮುಂಬೈನ ಜಸ್ಲೋಕ್ ಆಸ್ಪತ್ರೆಯ ಸಮೀಪವಿರುವ '33 ಸೌತ್' ಎಂಬ 28 ಅಂತಸ್ತಿನ ಗಗನಚುಂಬಿ ಕಟ್ಟಡದಲ್ಲಿ ಈ ಮನೆ ಇದೆ. ಚಂದ್ರಶೇಖರನ್ ಇಲ್ಲೇ ಕಳೆದ ಐದು ವರ್ಷಗಳಿಂದ ಭೋಗ್ಯಕ್ಕಿದ್ದರು. ಇದೀಗ ಅವರು ಈ ಮನೆಯನ್ನೇ ಖರೀದಿಸಿದ್ದಾರೆ.

11ನೇ ಮತ್ತು 12ನೇ ಮಹಡಿಯಲ್ಲಿರುವ ಡ್ಯೂಪ್ಲೆಕ್ಸ್ ಮನೆ ಸುಮಾರು 6,000 ಚದರ ಅಡಿ ವಿಸ್ತೀರ್ಣದ ಕಾರ್ಪೆಟ್ ಪ್ರದೇಶ ಹೊಂದಿದೆ. "ಚಂದ್ರಶೇಖರ್‌ ಈಗಾಗಲೇ ಕೆಲವು ವರ್ಷಗಳಿಂದ 20 ಲಕ್ಷ ರೂ.ಗಳ ಮಾಸಿಕ ಬಾಡಿಗೆಗೆ ಇಲ್ಲಿ ವಾಸಿಸುತ್ತಿದ್ದರು" ಎಂದು ಒಪ್ಪಂದದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ.

Edited By : Vijay Kumar
PublicNext

PublicNext

07/05/2022 06:57 pm

Cinque Terre

26.78 K

Cinque Terre

0

ಸಂಬಂಧಿತ ಸುದ್ದಿ