ನವದೆಹಲಿ: ಪ್ರತಿಷ್ಟಿತ ಜೆಕೆ ಟೈರ್ ಕಂಪನಿಯು ಹೊಸ ವಿನ್ಯಾಸವುಳ್ಳ ಪಂಕ್ಚರ್ ನಿರೋಧಕ ಟೈರ್‌ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡಿದೆ. ಇತ್ತೀಚಿನ ಮಾದರಿಯ ಕಾರುಗಳಿಗೆ ಹೊಂದಾಣಿಕೆಯಾಗುವ ಟೈರ್ ಇದಾಗಿದ್ದು ಪಂಕ್ಚರ್ ಗಾರ್ಡ್ ತಂತ್ರಜ್ಞಾನವನ್ನು ಇವುಗಳಲ್ಲಿ ಅಳವಡಿಸಲಾಗಿದೆ.
ಪಂಕ್ಚರ್ ಗಾರ್ಡ್ ಟೈರ್ ತಂತ್ರಜ್ಞಾನವು ಸ್ವಯಂ-ಗುಣಪಡಿಸುವ ಎಲಾಸ್ಟೊಮರ್ ಒಳಗಿನ ಕೋಟ್‌ನೊಂದಿಗೆ ಬರುತ್ತದೆ. ಇದನ್ನು ಟೈರ್‌ಗಳ ಒಳಗೆ ಇರುವುದರಿಂದ ಇದು ತನ್ನಿಂದ ತಾನಾಗಿಯೇ ಪಕ್ಚರ್‌ಗಳನ್ನು ರಿಪೇರಿ ಮಾಡುತ್ತದೆ. ಮೊಳೆ ಸೇರಿದಂತೆ ಸುಮಾರು 6.0 ಮಿಮೀ ವ್ಯಾಸವನ್ನು ಒಳಗೊಂಡ ಚೂಪಾದ ವಸ್ತುಗಳಿಂದ ಪಂಕ್ಚರ್ ಆದರೂ ಟೈರ್‌ಗೆ ಏನೂ ಆಗದು ಎಂದು ಕಂಪನಿ ತಿಳಿಸಿದೆ. ಚೂಪಾದ ವಸ್ತುಗಳಿಂದ ಚಕ್ರದ ಹೊರಮೈಯಲ್ಲಿರುವ ಅನೇಕ ಪಂಕ್ಚರ್‌ಗಳನ್ನು ತಕ್ಷಣವೇ ಸ್ವಯಂ ದುರಸ್ತಿ ಮಾಡಿಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.
PublicNext
25/03/2022 04:51 pm