ಮುಂಬೈ: ಸಣ್ಣ ಪ್ರಮಾಣದಲ್ಲಿ ಸಾಲ ವಿತರಿಸುವ ಸಂಸ್ಥೆಗಳು ದುಬಾರಿ ಬಡ್ಡಿ ದರ ವಿಧಿಸುವಂತಿಲ್ಲ. ತಡವಾಗಿ ಪಾವತಿ ಮಾಡಿದರೆ, ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ದಂಡ ವಿಧಿಸಬೇಕು ಎಂದು ಭಾರತೀಯ ರಿಸರ್ವ ಬ್ಯಾಂಕ್ (ಆರ್‌ಬಿಐ) ಸೋಮವಾರ ಎಚ್ಚರಿಕೆ ನೀಡಿದೆ.
ಸಾಲದ ಮೇಲಿನ ಬಡ್ಡಿ ಹಾಗೂ ಅದಕ್ಕೆ ಸಂಬಂಧಿಸಿದ ಶುಲ್ಕಗಳ ವಿಚಾರವಾಗಿ ಮಿತಿ ನಿಗದಿ ಮಾಡುವಂತೆಯೂ ಆರ್‌ಬಿಐ ಸೂಚಿಸಿದೆ. ವಾರ್ಷಿಕ 3 ಲಕ್ಷ ರೂ.ವರೆಗೆ ಆದಾಯ ಇರುವ ಕುಟುಂಬಕ್ಕೆ ಅಡಮಾನ ಇಲ್ಲದೆ ನೀಡುವ ಸಾಲವನ್ನು ಸಣ್ಣ ಪ್ರಮಾಣದ ಸಾಲ ಎಂದು ವರ್ಗೀಕರಿಸಲಾಗುತ್ತದೆ. ಸಾಲ ಕೊಡಲು ಕಾನೂನು ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಸಂಸ್ಥೆಗಳು ಸಾಲದ ಮೇಲಿನ ಬಡ್ಡಿ, ಶುಲ್ಕದ ಮಾಹಿತಿಯನ್ನು ಸಾಲ ಪಡೆಯುವವರಿಗೆ ನಿರ್ದಿಷ್ಟ ರೂಪದಲ್ಲಿ, ಸರಳವಾಗಿ ತಿಳಿಸಬೇಕು ಎಂದೂ ಆರ್‌ಬಿಐ ಹೇಳಿದೆ.
PublicNext
14/03/2022 10:11 pm