ಮುಂಬೈ: ಭಾರತ ಸರ್ಕಾರ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆ ಹೆಚ್ಚಿಸುವ ಮತ್ತು ನಿಯಮಿತ ವಿಮಾನಯಾನ ಮರು ಆರಂಭಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ವಿಮಾನ ದರ ಶೇಕಡ 40 ರಷ್ಟು ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತಿದೆ.
ಇದೇ ಮಾರ್ಚ್-27 ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಗೊಳ್ಳುತ್ತಿದೆ. ಕೋವಿಡ್ ಲಾಕ್ ಡೌನ್ ನಿಂದ ವಿಮಾನಯಾನ ಬಹುತೇಕ ಬಂದ್ ಆಗಿತ್ತು. ಆದರೆ ಈಗ ಎಲ್ಲ ವಿಮಾನ ಸಂಸ್ಥೆಗಳು ವಿಮಾನ ಸಂಖ್ಯೆ ಹೆಚ್ಚಿಸುವ ಹಿನ್ನೆಲೆಯಲ್ಲಿಯೇ ಯೋಚಿಸುತ್ತಿವೆ.
ಲುಫ್ಥಾನ್ ಏರ್‌ಲೈನ್ಸ್,ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಗಳು ವಿಮಾನಯಾನವನ್ನ ಡಬಲ್ ಮಾಡಲು ನಿರ್ಧರಿಸಿವೆ.ಸಿಂಗಪೂರ್ ಏರ್‌ಲೈನ್ಸ್, ಇಂಡಿಗೋ ಕೂಡ ವಿಮಾನಯಾನ ಹೆಚ್ಚಿಸಲು ಡಿಸೈಡ್ ಮಾಡಿವೆ.
PublicNext
14/03/2022 12:48 pm