ಮುಂಬೈ: ರಷ್ಯಾ-ಉಕ್ರೇನ್ ಸಂಘರ್ಷವು ಭಾರತದ ಷೇರು ಮಾರುಕಟ್ಟೆ ಮೇಲೆ ಭಾರಿ ಹೊಡೆತ ನೀಡಿತ್ತು. ಸದ್ಯ ಸುಧಾರಣೆ ಕಾಣುತ್ತಿರುವ ಷೇರು ಮಾರುಕಟ್ಟೆಯಲ್ಲಿ ಇಂದು ಬಿಎಸ್‌ಇ ಸೆನ್ಸೆಕ್ಸ್ 388 ಅಂಕ ಜಿಗಿದು 56,247.28ಕ್ಕೆ ತಲುಪಿದೆ. ಸೆನ್ಸೆಕ್ಸ್ ಮಿಡ್‌ಕ್ಯಾಪ್ ಸೂಚ್ಯಂಕ ಇಂದು 203 ಅಂಕಗಳ ಏರಿಕೆಯೊಂದಿಗೆ 23,366.10 ಕ್ಕೆ ಹಸಿರು ಬಣ್ಣದಲ್ಲಿ ಮುಕ್ತಾಯವಾಯಿತು.
ಇನ್ನು ಬಿಎಸ್‌ಇ ಸ್ಮಾಲ್‌ಕ್ಯಾಪ್ 220 ಪಾಯಿಂಟ್‌ಗಳ ಏರಿಕೆಯೊಂದಿಗೆ 26,670.98ಕ್ಕೆ ದಿನದ ವಹಿವಾಟನ್ನು ಕೊನೆಗೊಳಿಸಿತು. ಇತ್ತ ನಿಫ್ಟಿ 50 ಸೂಚ್ಯಂಕ 120 ಅಂಕಗಳ ಏರಿಕೆಯೊಂದಿಗೆ 16,778.45ಕ್ಕೆ ಕೊನೆಗೊಂಡಿತು. ಅದೇ ಸಮಯದಲ್ಲಿ ಬ್ಯಾಂಕ್ ನಿಫ್ಟಿ 235 ಅಂಕಗಳ ಕುಸಿತದೊಂದಿಗೆ 36,195.75ಕ್ಕೆ ಕೊನೆಗೊಂಡಿತು.
PublicNext
28/02/2022 07:14 pm