ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ ಭಾರತೀಯ ಷೇರುಪೇಟೆ ಭಾರಿ ಕುಸಿತ ಕಂಡಿದೆ. ನಿನ್ನೆ (ಶುಕ್ರವಾರ) ವ್ಯಾಪಾರದ ಮೊದಲ ಗಂಟೆಯಲ್ಲಿ ಭಾರತೀಯ ಹೂಡಿಕೆದಾರರ ಸಂಪತ್ತು 8 ಲಕ್ಷ ಕೋಟಿ ರೂ.ಗಳಷ್ಟು ಕುಸಿದಿದೆ.
ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು ಬುಧವಾರದ ಅಂತ್ಯದ ವೇಳೆಗೆ 2,55,68,668 ಕೋಟಿ ರೂಪಾಯಿಗಳಿಂದ ಗುರುವಾರ ಬೆಳಿಗ್ಗೆ 10.15ರ ಸುಮಾರಿಗೆ 2,47,46,960.48 ಕೋಟಿ ರೂಪಾಯಿಗಳಿಗೆ ಕುಸಿದಿತ್ತು. ಇಂಟ್ರಾಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ 2,000 ಅಂಕಗಳಿಗಿಂತ ಹೆಚ್ಚು ಕುಸಿದಿತ್ತು.
ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಪೇಟೆಯಲ್ಲಿ ಅಸ್ಥಿರತೆ ತಲೆದೋರಲಿದ್ದು, ಹೂಡಿಕೆದಾರರು ಮತ್ತಷ್ಟು ನಷ್ಟ ಅನುಭವಿಸಲಿದ್ದಾರೆ. ಈ ಸಮಸ್ಯೆ ಭಾರತೀಯ ಹೂಡಿಕೆದಾರರಿಗೆ ಮಾತ್ರವಲ್ಲ ಜಾಗತಿಕ ಷೇರುಪೇಟೆಗಳೆಲ್ಲವೂ ಕುಸಿತದ ಹಾದಿಯಲ್ಲೇ ಇವೆ.
PublicNext
25/02/2022 07:29 am