ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟರಾಜನ್ ಚಂದ್ರಶೇಖರನ್ : ಟಾಟಾ ಸನ್ಸ್ ಸಂಸ್ಥೆ ಚೇರ್ಮನ್ ಆಗಿ ಮರು ನೇಮಕ

ನವದೆಹಲಿ : ಇತ್ತೀಚೆಗೆ, ಟಾಟಾ ಗ್ರೂಪ್ 69 ವರ್ಷಗಳ ನಂತರ ಏರ್ ಇಂಡಿಯಾದ ನಿಯಂತ್ರಣವನ್ನು ಮರಳಿ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಟಾಟಾ ಸನ್ಸ್ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಹುದ್ದೆಗೆ 58 ವರ್ಷದ ಎನ್.ಚಂದ್ರಶೇಖರನ್ ಅವರನ್ನು ಮರು ನೇಮಕ ಮಾಡಲಾಗಿದೆ.

ಟಾಟಾ ಸನ್ಸ್ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪ್ರಸ್ತುತ ಅಧಿಕಾರದಲ್ಲಿರುವ ಚಂದ್ರಶೇಖರನ್ ಅವರ ಅಧಿಕಾರದ ಅವಧಿ ಫೆಬ್ರವರಿ 20 ರಂದು ಕೊನೆಯಾಗಲಿದೆ.

ಹಾಗಾಗಿ ಸಭೆಯ ಏರ್ಪಡಿಸಲಾಗಿತ್ತು. ವಿಶೇಷ ಆಹ್ವಾನಿತರಾಗಿದ್ದ ರತನ್ ಟಾಟಾ ಚಂದ್ರಶೇಖರನ್ ಅವರ ನೇತೃತ್ವದಲ್ಲಿ ಟಾಟಾ ಗ್ರೂಪ್ ನ ಪ್ರಗತಿ ಮತ್ತು ಕಾರ್ಯಕ್ಷಮತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಅವರ ಅವಧಿಯನ್ನು ಇನ್ನೂ ಐದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲು ಶಿಫಾರಸು ಮಾಡಿದರು.

2016ರ ಅಕ್ಟೋಬರ್ ನಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದ್ದ ಎನ್.ಚಂದ್ರಶೇಖರನ್ ಅವರು 2017ರ ಜನವರಿಯಲ್ಲಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇನ್ನು ಟಾಟಾ ಗ್ರೂಪ್ ಏರ್ ಇಂಡಿಯಾದ ನಿಯಂತ್ರಣವನ್ನು ಮರಳಿ ಪಡೆದುಕೊಳ್ಳುವಲ್ಲಿ ಎನ್.ಚಂದ್ರಶೇಖರನ್ ಅವರ ನಿರ್ಧಾರಗಳು ಮಹತ್ವದ ಸ್ಥಾನ ಪಡೆದುಕೊಂಡಿದ್ದವು.

Edited By : Nirmala Aralikatti
PublicNext

PublicNext

12/02/2022 09:14 am

Cinque Terre

65.86 K

Cinque Terre

0

ಸಂಬಂಧಿತ ಸುದ್ದಿ