ವಾಷಿಂಗ್ಟನ್: ಉಕ್ರೇನ್ ದೇಶದ ಮೇಲೆ ರಷ್ಯಾ ದಾಳಿ ಮಾಡಿ ಸರ್ವನಾಶ ಮಾಡುತ್ತಿದೆ. ಈ ವೇಳೆಯಲ್ಲಿ ಅಲ್ಲಿಯ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಒಂದು ಸಮಯದಲ್ಲಿಯೇ ವಿಶ್ವ ಬ್ಯಾಂಕ್ ಉಕ್ರೇನ್ ದೇಶಕ್ಕೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ.
ವಿಶ್ವ ಬ್ಯಾಂಕ್ ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಕಳವಳ ವ್ಯಕ್ತಪಡಿಸಿದೆ. ಮಿಲಿಟರಿ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರೋ ಉಕ್ರೇನ್ ದೇಶಕ್ಕೆ ಆರ್ಥಿಕ ನೆರವಿನ ಅಗತ್ಯ ಇದೆ. ಇದನ್ನ ನಾವು ಕೊಡಲು ಸಿದ್ಧ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್‌ಪಾಸ್ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿ ನಡೀತಿರೊ ಜೀವಹಾನಿ ಮತ್ತು ಹಿಂಸಾಚಾರದಿಂದ ಬೇಸರ ಆಗಿದೆ. ಇತರ ರಾಷ್ಟ್ರಗಳೂ ಈಗ ಉಕ್ರೇನ್‌ಗೆ ನೆರವಾಗಬೇಕಿದೆ ಅಂತಲೇ ಡೇವಿಡ್ ಕೇಳಿಕೊಂಡಿದ್ದಾರೆ.
PublicNext
25/02/2022 10:32 am