ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತಕ್ಕೆ 85ನೇ ಸ್ಥಾನ

ನವದೆಹಲಿ: 'ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2021' (ಸಿಪಿಐ) ಪಟ್ಟಿಯಲ್ಲಿ 180 ದೇಶಗಳ ಪೈಕಿ ಭಾರತಕ್ಕೆ 85ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ ಒಂದು ಸ್ಥಾನ ಉತ್ತಮಪಡಿಸಿಕೊಂಡಿದೆ.

ಜಗತ್ತಿನಾದ್ಯಂತ ಭ್ರಷ್ಟಾಚಾರದ ಮಟ್ಟವನ್ನು ಮೌಲ್ಯಮಾಪನ ಮಾಡುವ ಜರ್ಮನಿಯ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಈ ವರದಿಯನ್ನ ಬಿಡುಗಡೆ ಮಾಡಿದೆ. ಸಾರ್ವಜನಿಕ ವಲಯದಲ್ಲಿ ನಡೆಯುವ ಭ್ರಷ್ಟಾಚಾರ ಕುರಿತು ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಹೆಚ್ಚು ಅಂಕ ಪಡೆದ (0ರಿಂದ 100ರವರೆಗೆ) ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ಕಡಿಮೆ ಎಂದು ಪರಿಗಣಿಸಲಾಗುತ್ತದೆ.

ವಿಶ್ವದ ಬಲಿಷ್ಠ ರಾಷ್ಟ್ರವಾಗಿರುವ ಚೀನಾ ಭಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ 45 ಅಂಕಗಳೊಂದಿಗೆ ಕಳಪೆ ಸಾಧನೆ ಮಾಡಿದೆ. ಭಾರತ 40, ಇಂಡೋನೇಷ್ಯಾ 38, ನೆರೆಯ ಪಾಕಿಸ್ತಾನ 28 ಹಾಗೂ ಬಾಂಗ್ಲಾದೇಶ 26 ಅಂಕಗಳನ್ನು ಗಿಟ್ಟಿಸಿಕೊಂಡಿವೆ. ಭೂತಾನ್ ಹೊರತುಪಡಿಸಿ ಇತರೆ ಎಲ್ಲ ನೆರೆಯ ರಾಷ್ಟ್ರಗಳು ಭಾರತಕ್ಕಿಂತಲೂ ಕಳಪೆ ಸಾಧನೆಗೈದಿವೆ. 16 ಸ್ಥಾನಗಳ ಕುಸಿತ ಕಂಡಿರುವ ಪಾಕಿಸ್ತಾನ 140ಕ್ಕೆ ತಲುಪಿದೆ.

Edited By : Vijay Kumar
PublicNext

PublicNext

27/01/2022 08:11 am

Cinque Terre

32.49 K

Cinque Terre

0

ಸಂಬಂಧಿತ ಸುದ್ದಿ