ನವದೆಹಲಿ: ಉಕ್ರೇನ್ ದೇಶದ ಮೇಲೆ ರಷ್ಯಾದ ಆಕ್ರಮಣದ ಬೆನ್ನಲ್ಲಿಯೇ ಒಂದು ಬ್ಯಾರಲ್ ಕಚ್ಚಾ ತೈಲದ ದರ 140 ಯುಎಸ್ ಡಾಲರ್‌ಗೆ ತಲುಪಿದೆ. ಯುದ್ಧದ ನಡುವೆಯೂ ಮಿತ್ರ ದೇಶ (ರಷ್ಯಾ) ಭಾರತದ ಸಹಾಯಕ್ಕೆ ನಿಂತಿದೆ.
ಹೌದು. ಕಚ್ಚಾ ತೈಲದ ದರ ಏರಿಕೆಯನ್ನು ಗಮನಿಸಿರುವ ರಷ್ಯಾ, ಭಾರತಕ್ಕೆ ಬರೋಬ್ಬರಿ 3.5 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಭಾರೀ ರಿಯಾಯಿತಿಯಲ್ಲಿ ನೀಡಲು ಮುಂದಾಗಿದೆ. ಭಾರತ ಕೂಡ ಬಹುತೇಕವಾಗಿ ಇದಕ್ಕೆ ಒಪ್ಪಿಕೊಂಡಿದೆ ಎನ್ನಲಾಗಿದೆ. ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಸಂಕಷ್ಟದಲ್ಲಿರುವ ರಷ್ಯಾಗೂ ಇದು ಅಗತ್ಯವಾಗಿ ಬೇಕಾದ ಒಪ್ಪಂದ ಎನಿಸಿದೆ. ಒಪ್ಪಂದದ ನಿಯಮಗಳ ಅನುಸಾರ ರಷ್ಯಾವು ಭಾರತಕ್ಕೆ ತಲುಪಿಸಲಾಗುವ ಕಚ್ಚಾ ತೈಲದ ಸಾಗಣೆ ಮತ್ತು ವಿಮೆಯನ್ನು ಸಹ ನೋಡಿಕೊಳ್ಳುತ್ತದೆ ಎನ್ನಲಾಗಿದೆ.
PublicNext
16/03/2022 10:51 pm