ಬೆಂಗಳೂರು: ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ನ ನೂತನ ಸಿಇಒ ಆಗಿ ಮಾಳವಿಕ ಸಿದ್ದಾರ್ಥ್ ಹೆಗ್ಡೆ ನೇಮಕವಾಗಿದ್ದಾರೆ.
ಮಾಳವಿಕಾ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಅವರ ಪತ್ನಿ.
'ಕಂಪನಿಯ ನಿರ್ದೇಶಕಿ ಆಗಿರುವ ಮಾಳವಿಕಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಇಒ ಆಗಿ ನೇಮಕ ಮಾಡಲಾಗಿದೆ' ಎಂದು ಕಂಪನಿ ತಿಳಿಸಿದೆ.
ಕಳೆದ ಒಂದು ವರ್ಷದ ಹಿಂದೆ ಆರ್ಥಿಕ ಒತ್ತಡಗಳ ಕಾರಣ ವಿ .ಜಿ ಸಿದ್ದಾರ್ಥ ಮಂಗಳೂರು ಬಳಿಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆ ಸಂದರ್ಭದಲ್ಲಿ ಸಂಸ್ಥೆಯ ಸ್ವತಂತ್ರ ನಿರ್ದೇಶಕರಾಗಿದ್ದ ಎಸ್ ವಿ ರಂಗನಾಥ್ ಅವರು ರವರು ಮಧ್ಯಂತರ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಕಂಪನಿಯ ನಿರ್ದೇಶಕ ಮಂಡಳಿಯವರು ಸಿ.ಎಚ್.ವಸುಂಧರಾ ದೇವಿ. ಗಿರಿ ದೇವನೂರ್, ಮೋಹನ್ ರಾಘವೇಂದ್ರ ಕೊಂಡಿ ಅವರನ್ನ ಹೆಚ್ಚುವರಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.
PublicNext
08/12/2020 11:32 am