ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದೃಷ್ಟ ಅಂದ್ರೆ ಇದು: 2 ವರ್ಷದಲ್ಲಿ ತನ್ನದೇ ಜಮೀನಿನಲ್ಲಿ ರೈತನಿಗೆ ಸಿಕ್ತು 6 ವಜ್ರಗಳು

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತ ಪ್ರಕಾಶ್‌ ಮಜುಂದಾರ್ ಎಂಬವರಿಗೆ ಕಳೆದ ಎರಡು ವರ್ಷಗಳಲ್ಲಿ 6ನೇ ಬಾರಿಗೆ ತಮ್ಮ ಜಮೀನಿನಲ್ಲಿ ವಜ್ರ ಸಿಕ್ಕಿದೆ.

ರೈತ ಪ್ರಕಾಶ್‌ ಮಜುಂದಾರ್ ಅವರು ಸರ್ಕಾರದಿಂದ ಭೋಗ್ಯಕ್ಕೆ ಜಮೀನಿನಲ್ಲಿ ಪಡೆದುಕೊಂಡಿದ್ದು, ಗಣಿಗಾರಿಕೆ ನಡೆಸಿದ್ದಾರೆ. ಈ ಬಾರಿ ಅವರಿಗೆ 6.47 ಕ್ಯಾರೆಟ್‌ ಮೌಲ್ಯದ ವಜ್ರದ ಹರಳ ದೊರೆಕಿದೆ. ಅದನ್ನು ನ್ಯಾಯವಾಗಿ ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದಾರೆ. ಇದನ್ನು ಹರಾಜು ಹಾಕಲಿರುವ ಜಿಲ್ಲಾಡಳಿತ ಬಂದ ಹಣದಲ್ಲಿ ಪ್ರಕಾಶ್‌ಗೆ ಪಾಲು ನೀಡಲಿದೆ. ಈ ಹಣವನ್ನು ಪ್ರಕಾಶ್‌, ಇತರೆ ನಾಲ್ವರು ಪಾಲುದಾರರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಈಗಿನ ಅಂದಾಜಿನ ಪ್ರಕಾರ ಪ್ರಸ್ತುತ ಸಿಕ್ಕಿರುವ 6.47 ಕ್ಯಾರೆಟ್‌ ಮೌಲ್ಯದ ವಜ್ರಕ್ಕೆ 30 ಲಕ್ಷ ರೂ. ಸಿಗಲಿದೆ. ಕಳೆದ ವರ್ಷವೂ ಅವರಿಗೆ 7.44 ಕ್ಯಾರೆಟ್‌ ಮೌಲ್ಯದ ವಜ್ರ ಸಿಕ್ಕಿದ್ದರೆ, ಅದಕ್ಕೂ ಮುನ್ನ 2ರಿಂದ 2.5 ಕ್ಯಾರೆಟ್‌ನ 4 ನಾಲ್ಕು ಅಮೂಲ್ಯ ಹರಳು ಅವರ ಪಾಲಾಗಿತ್ತು.

Edited By : Vijay Kumar
PublicNext

PublicNext

29/08/2021 08:02 am

Cinque Terre

67.23 K

Cinque Terre

0

ಸಂಬಂಧಿತ ಸುದ್ದಿ