ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಒಂದು ಭಾರತ ಒಂದೇ ಚಿನ್ನದ ದರ' : ಮಲಬಾರ್ ಗೋಲ್ಡ್

ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ ಡೈಮಂಡ್ಸ್ ಕಂಪನಿ ದೇಶದ ಎಲ್ಲ ರಾಜ್ಯಗಳಲ್ಲೂ ಏಕರೂಪದ ಬೆಲೆಯಲ್ಲಿ ಚಿನ್ನ ಮಾರಾಟ ಮಾಡುವ ತನ್ನ ಬಹುನಿರೀಕ್ಷಿತ 'ಒಂದು ಭಾರತ ಒಂದೇ ಚಿನ್ನದ ಬೆಲೆ ಯೋಜನೆಗೆ ಚಾಲನೆ ನೀಡಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರಗಳು ಪಾರದರ್ಶಕವಾಗಿವೆ.

ಆದರೆ, ಭಾರತದಲ್ಲಿ ಮಾತ್ರ ರಾಜ್ಯದಿಂದ ರಾಜ್ಯಕ್ಕೆ ಚಿನ್ನದ ದರ ಬೇರೆ ಬೇರೆ ಆಗಿದೆ.

ಪ್ರತಿ ಗ್ರಾಂ ಚಿನ್ನಕ್ಕೆ ಗರಿಷ್ಠ ₹ 400ರವರೆಗೆ ವ್ಯತ್ಯಾಸ ಕಂಡುಬರುತ್ತದೆ. ಇದನ್ನು ಗಮನಿಸಿ ರಾಷ್ಟ್ರವ್ಯಾಪಿ ಏಕರೂಪದ ದರ ನಿಗದಿಪಡಿಸುವ ನೀತಿಯನ್ನು ಸಿದ್ಧಪಡಿಸಲಾಗಿದೆ ಎಂದು ಮಲಬಾರ್ ಗೋಲ್ಡ್ ಹೇಳಿದೆ.

ದೇಶದಲ್ಲಿ ಚಿನ್ನವನ್ನು ಉಳಿತಾಯ ಮತ್ತು ಹೂಡಿಕೆಯ ಸಾಧನವಾಗಿಯೂ ಪರಿಗಣಿಸಲಾಗುತ್ತಿದೆ.

'ಒಂದು ಭಾರತ ಒಂದೇ ಚಿನ್ನದ ದರ' ಯೋಜನೆಯು ದೇಶದಾದ್ಯಂತ ನ್ಯಾಯಸಮ್ಮತವಾದ ದರದಲ್ಲಿ ಚಿನ್ನ ಖರೀದಿಯನ್ನು ಗ್ರಾಹಕರಿಗೆ ಖಾತರಿಪಡಿಸುತ್ತದೆ.

ಅಲ್ಲದೆ, ದೇಶದಲ್ಲಿ ಎಲ್ಲಿಯೇ ಖರೀದಿಸಿದ್ದರೂ ಆ ಚಿನ್ನವನ್ನು ಮಾರಾಟ ಮಾಡುವಾಗ ಬೈಬ್ಯಾಕ್ ಭರವಸೆಯೂ ಇಲ್ಲಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Edited By : Nirmala Aralikatti
PublicNext

PublicNext

29/10/2020 07:46 am

Cinque Terre

27.06 K

Cinque Terre

0

ಸಂಬಂಧಿತ ಸುದ್ದಿ