ನವದೆಹಲಿ- ಲಾಕ್ ಡೌನ್ ಅವಧಿಯಲ್ಲಾದ ನಷ್ಟ ಸರಿದೂಗಿಸಿಕೊಳ್ಳಲು ಮತ್ತು ಆದಾಯ ಕ್ರೋಢೀಕರಣ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಹೆಣಗಾಡುತ್ತಿದೆ.
ಅದರ ಭಾಗವಾಗಿ ಸದ್ಯದರಲ್ಲೇ ಮತ್ತೊಮ್ಮೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.
ಈ ಬಾರಿ ₹3ರಿಂದ ₹6 ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ನೇರವಾಗಿ ಶ್ರೀಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಹತ್ವದ ಚರ್ಚೆಯಾಗಿದೆ ಎಂದು ದೆಹಲಿಯ ಅಧಿಕೃತ ಮಾಧ್ಯಮವೊಂದು ವರದಿ ಮಾಡಿದೆ.
ಲಾಕ್ ಡೌನ್ ಹೊಡೆತದಿಂದ ಜನರು ಚೇತರಿಸಿಕೊಳ್ಳುವ ಮೊದಲೇ ಬೆಲೆ ಏರಿಕೆ ಜಾರಿಯಾದರೆ ಸಾಮಾನ್ಯ ಜನ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
PublicNext
26/10/2020 08:56 pm