ಬೀದರ್ : ಎರಡು ಬೈಕ್ ನಡುವೆ ಅಪಘಾತ ಸಂಭವಿಸಿ ಒಬ್ಬ ಯುವಕ ಮೃತಪಟ್ಟಿದ್ದು, ಇನ್ನೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಾಲ್ಕಿ ತಾಲ್ಲೂಕಿನ ಬಸವನಗರದ ಹತ್ತಿರ ನಡೆದಿದೆ.
ಕುಂಟೆಸಿರ್ಸಿ ಗ್ರಾಮದ ನಿವಾಸಿಯಾದ ಮಹೇಶ್ (22) ಮೃತಪಟ್ಟ ಯುವಕನಾಗಿದ್ದು, ನಾವದಗಿ ಗ್ರಾಮದ ನಿವಾಸಿಯಾದ ವಿವೇಕಾನಂದ (36) ಗಾಯಗೊಂಡ ವ್ಯಕ್ತಿಯಾಗಿದ್ದಾನೆ.
ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಮಹೇಶ್ ಭಾಲ್ಕಿಯಿಂದ ತನ್ನ ಗ್ರಾಮವಾದ ಕುಂಟೆಸಿರ್ಸಿಗೆ ತೆರಳುತಿದ್ದ. ವಿವೇಕಾನಂದ ಎಂಬಾತ ಬೈಕ್ ಮೇಲೆ ಎದುರಿನಿಂದ ಬರುತ್ತಿದ್ದನು. ಈ ಸಮಯದಲ್ಲಿ ಎರಡು ಬೈಕ್ ಮಧ್ಯ ಡಿಕ್ಕಿಯಾಗಿದೆ. ಮಹೇಶ್ ಎನ್ನುವ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ವಿವೇಕಾನಂದನನ್ನು ಬೀದರನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/01/2025 03:21 pm