ಅಥಣಿ: ದೇಶದಲ್ಲಿ ನವರಾತ್ರಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ರಾಜ್ಯದ ಶಕ್ತಿ ದೇವತೆಗಳ ದೇವಸ್ಥಾನದಲ್ಲಿ ನವರಾತ್ರಿ ಹಬ್ಬವನ್ನು ಭಕ್ತರು ಭಕ್ತಿಯ ಜೊತೆಗೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಯಲ್ಲಮ್ಮ ದೇವಸ್ಥಾನದಲ್ಲಿ ನವರಾತ್ರಿ ಹಬ್ಬವನ್ನು ರಾಜ್ಯ ಅಂತಾರಾಜ್ಯ ಭಕ್ತರು ಆಗಮಿಸಿ ಗಡಿನಾಡು ಶಕ್ತಿ ದೇವತೆ ದರ್ಶನ ಪಡೆದುಕೊಂಡು ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆಯುತಿದ್ದಾರೆ. ಯಲ್ಲಮ್ಮ ತಾಯಿಗೆ ಹೂ ಬಂಡಾರ ಎರಚಿ ದೀಪಕ್ಕೆ ಎಣ್ಣೆ ಹಾಕಿ ಯಲ್ಲಮ್ಮ ದೇವಿಗೆ ಊದೋ ಊದೋ ಎಂದು ಭಕ್ತರು ಭಕ್ತಿಯನ್ನು ಮೆರೆಯುತ್ತಿದ್ದಾರೆ.
ಪ್ರತಿನಿತ್ಯ ರಾಜ್ಯ ಅಲ್ಲದೆ ಪಕ್ಕದ ಮಹಾರಾಷ್ಟ್ರ ರಾಜ್ಯದ ದಿನನಿತ್ಯ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ದೇವತೆಗೆ ಉಡಿ ತುಂಬಿ, ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆಯುತ್ತಾರೆ. ಒಂಬತ್ತು ದಿನದ ವರಿಗೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ದೇವಸ್ಥಾನದ ಆವರಣದಲ್ಲಿ ನವರಾತ್ರಿ ಹಬ್ಬವನ್ನು ಭಕ್ತಿ ಭಾವ ನಿಷ್ಠೆಯಿಂದ ಭಕ್ತರು ಆಚರಣೆ ನಡೆಸುತ್ತಿದ್ದಾರೆ.
PublicNext
03/10/2022 10:19 am