ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಬರಗಿ ಗ್ರಾಮದಲ್ಲಿ ಹರಳಯ್ಯ ಜಯಂತಿ ಆಚರಣೆ

ಅಥಣಿ :ತಾಲೂಕಿನ ಸಂಬರಗಿ ಗ್ರಾಮದಲ್ಲಿ ಕವಿ ಹರಳಯ್ಯ ನವರ ಜಯಂತಿ ಆಚರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮಹಿಳೆಯಾರು ಗ್ರಾಮಸ್ಥರು ಭಾಗಿಯಾಗಿ ಕಾರ್ಯಕ್ರಮಕ್ಕೆ ಶೋಭೆ ತಂದರು.

ಹರಳಯ್ಯ 12ನೆಯ ಶತಮಾನದ ಶಿವಶರಣ. ಬಸವಣ್ಣನವರ ಸಮಕಾಲೀನವರು. ಇವರು

ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತನಾಗಿದ್ದ ಈತ ಗುರು ಲಿಂಗ ಜಂಗಮ ಸೇವೆಗೆ ತನ್ನ ತನುಮನಧನ ಗಳನ್ನು ಮುಡಿಪಾಗಿಟ್ಟಿದ್ದವ.

ಒಮ್ಮೆ ಬಸವಣ್ಣನವರನ್ನು ಮಾರ್ಗಮಧ್ಯ ದಲ್ಲಿ ಭೇಟಿಯಾದ ಹರಳಯ್ಯ, ಶರಣು ಬಸವರಸ ಎಂದು ತಲೆಬಾಗಿ ವಂದಿಸಿದ. ಅದಕ್ಕೆ ಪ್ರತಿಯಾಗಿ ಬಸವಣ್ಣ ಶರಣು, ಶರಣಾರ್ಥಿ ಹರಳಯ್ಯ ತಂದೆ ಎಂದು ವಂದಿಸಿದ. ತನ್ನ ಒಂದು ಶರಣಾರ್ಥಿಗೆ ಬಸವಣ್ಣ ಎರಡು ಶರಣಾರ್ಥಿ ಹೇಳಿದ, ಬಸವಣ್ಣನ ಒಂದು ಶರಣಾರ್ಥಿ ತನ್ನ ಮೇಲೆ ಹೊರೆಯಾಗಿ ಕುಳಿತಂತೆ ಭಾಸವಾಯಿತು, ಹರಳಯ್ಯನಿಗೆ. ಆ ಕುರಿತು ಪತ್ನಿಯೊಡನೆ ಸಮಾಲೋಚಿಸಿದ.

ಏನೂ ತೋಚದೆ ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರ ಪಾದಗಳಿಗೆ ತೊಡಿಸಿ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ ಸುಂದರವಾದ ಒಂದು ಜೊತೆ ಪಾದರಕ್ಷೆಗಳನ್ನು ತಯಾರಿಸಿಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟರು. ಬಸವಣ್ಣ ಅವುಗಳ ಶ್ರೇಷ್ಠತೆಯನ್ನು ಹೊಗಳಿ, ಅವನ್ನು ಹರಳಯ್ಯ ದಂಪತಿಗಳಿಗೆ ಹಿಂತಿರುಗಿಸಿದ ಎಂಬುದಾಗಿ ಬಸವ ಪುರಾಣ, ಭೈರವೇಶ್ವರಕಾವ್ಯ, ಕಥಾಮಣಿಸೂತ್ರರತ್ನಾಕರ,ಶರಣ ಲೀಲಾಮೃತ ಗ್ರಂಥಗಳಿಂದ ಗೊತ್ತಾಗುತ್ತದೆ.

Edited By : PublicNext Desk
Kshetra Samachara

Kshetra Samachara

08/12/2024 09:34 pm

Cinque Terre

3.84 K

Cinque Terre

0