ಬೈಲಹೊಂಗಲ : ಸಮೀಪದ ಮುರಗೋಡ ಶ್ರೀಕ್ಷೇತ್ರ ಕೆಂಗೇರಿ ಮಠದ ಶ್ರೀ ಚಿದಂಬರೇಶ್ವರ ಮೂಲ ಪೀಠ ಮೂಲ ಮಹಾಕ್ಷೇತ್ರ ಸಂಸ್ಥಾನದ ಶ್ರೀ ಶಿವಚಿದಂಬರೇಶ್ವರ ಮಹಾ ಸ್ವಾಮೀಜಿಯವರ 266ನೇ ಅವತಾರ ಜಯಂತಿ ಶೈವಾಗಮೋಕ್ತ ಮಹೋತ್ಸವ ನಿಮಿತ್ತ ಮಹಾ ರಥೋತ್ಸವ ಸಹಸ್ರಾರು ಸದ್ಭಕ್ತರ ನಡುವೆ ಶನಿವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.
ಪೀಠಾಧಿಕಾರಿ ಶ್ರೀ ದಿವಾಕರ ದಿಕ್ಷೀತ್ ಸ್ವಾಮೀಜಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಕ್ಷೇತ್ರ ಕೆಂಗೇರಿ ಎದುರಿನ ಆವರಣ ದಿಂದ ಆರಂಭಗೊಂಡ ರಥ ಚಿದಂಬರ ಸ್ವಾಮಿಗಳ ಮಠದ ಪ್ರದಕ್ಷಿಣೆ ಹಾಕಿ ಸಕಲ ವಾದ್ಯ ಮೇಳದೊಂದಿಗೆ ಮುಖ್ಯ ದ್ವಾರ ಬಾಗಿಲದ ವರೆಗೆ ಸಾಗಿತು. 'ಹರ ಹರ ಮಹಾದೇವ ಚಿದಂಬರೇಶ್ವರ ಮಹಾರಾಜಕೀ ಜೈ, ಶಿವ ಶಿವ ಶಿವ ಸಾಂಬ ಚಿದಂಬರ ಹರ ಹರ ಹರ ಸಾಂಬಚಿದಂಬರ, ಔದುಂಬರ ನಿವಾಸಿ ಭಕ್ತಾಬಿ ಮಾನಿ ರಾಜಾಧಿ ರಾಜ ಶಿವಚಿದಂಬರೇಶ್ವರ ಮಹಾರಾಜಕೀ ಜೈ... ಎಂಬ ಝೇಂಕಾರದ ಜೈಘೋಷಗಳು ಭಕ್ತರಿಂದ ಮೊಳಗಿದವು.
ಕೇದಿಗೆ, ಸೇವಂತಿಗೆ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಹಾಗೂ ನಾನಾ ಬಗೆಯ ಹೂವುಗಳು, ಭವ್ಯ ಹೂಮಾಲೆಗಳು, ಬಾಳೆದಿಂಡು, ತೆಂಗಿನ ಗರಿಗಳಿಂದ ಅಲಂಕೃತಗೊಂಡ ರಥ ಭಕ್ತರ ಮನ ಸೂರೆಗೊಂಡಿತು.
ಮಥುರಾತಾಯಿ ಗುರುಮಾತೆ, ಯಮುನಾತಾಯಿ ಗುರುಮಾತೆ, ಶ್ರೀ ಪ್ರಭಾಕರ ದಿಕ್ಷೀತ್ ಸ್ವಾಮೀಜಿ, ಶ್ರೀ ಪಾಂಡುರಂಗ ದಿಕ್ಷೀತ್ ಸ್ವಾಮೀಜಿ ನಾನಾ ಶ್ರೀಗಳು ಸಾನಿಧ್ಯ ವಹಿಸಿದ್ದರು.
Kshetra Samachara
07/12/2024 05:01 pm