ದಿಢೀರ್ ಮಳೆಗೆ ಉಕ್ಕಿಹರಿದ ಹಳ್ಳದಲ್ಲಿ ಯುವಕನೋರ್ವ ಕೊಚ್ಚಿ ಹೋದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಳವಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ದಂಡಪ್ಪಾ ಬಸಪ್ಪಾ ಮಾಲದಿನ್ನಿ (25) ಹಳ್ಳದಲ್ಲಿ ಕೊಚ್ಚಿ ಹೋದ ಯುವಕ ಎಂದು ಗುರುತಿಸಲಾಗಿದ್ದು, ದಿಢೀರ್ ಮಳೆಯಿಂದ ರಭಸದಿಂದ ಹರಿಯಲು ಆರಂಭಿಸಿದ ಹಳ್ಳದಲ್ಲಿ ಯುವಕನು ಕೊಚ್ಚಿ ಹೋಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ದಳವು ದೌಡಿಯಿಸಿ, ಯುವಕನಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
09/09/2022 08:37 pm