ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಅಂತ ರಾಜಕೀಯ ನಿವೃತ್ತಿಯ ಮಾತು ಆಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಬ್ಯಾಡ್ ಕೋಲೆಸ್ಟ್ರಾಲ್ ಹೆಚ್ಚಾಗಿದೆ. ಅದನ್ನ ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹನುಮಾಪುರ ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಮಾಡುತ್ತಿರುವ ಭಾರತ ಜೋಡೊ ಯಾತ್ರೆ ಅಲ್ಲ. ಕಾಂಗ್ರೆಸ್‌ನವರ ಕೊಬ್ಬು ಕರಗಿಸಿಕೊಳ್ಳಲು ನಡೆದಿರುವ ಯತ್ನ. ಇದನ್ನೆಲ್ಲ ಬಿಟ್ಟು ಜನ ಸೇವೆ ಮಾಡಿ ಎಂದರು.
PublicNext
12/10/2022 02:43 pm