ಹೆಚ್ಚು ಕಡಿಮೆ ಖರ್ಗೆ ಅಧ್ಯಕ್ಷರು ಆಗ್ತಾರೆ, ಅವರಿಗೆ ಹೆಚ್ಚು ಬೆಂಬಲ ಇದೆ. ಮೊದಲ ಬಾರಿಗೆ ಉತ್ತರ ಕರ್ನಾಟಕದವರಿಗೆ ದೊಡ್ಡ ಹುದ್ದೆ ಸಿಗುತ್ತಿರೋದು ಹೆಮ್ಮೆಯ ವಿಚಾರ, ಇದರಿಂದ ಕಾಂಗ್ರೆಸ್‌ಗೆ ಅನುಕೂಲ ಆಗುತ್ತೆ ಎಂದು ದಲಿತರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಆರ್.ಎಸ್.ಎಸ್ ನ ಕೈಗೊಂಬೆ ಆಗಿದೆ. ಕೈಗೊಂಬೆ ಆಗಿ ಕೆಲಸ ಮಾಡ್ತಿದೆ. ನಮಗೆ ಅವರು ಗಾಂಧಿ ಕುಟುಂಬದ ಕೈಗೊಂಬೆ ಅಂತಾ ಆರೋಪಿಸಿದ್ರೆ, ಅವರು ಆರ್ ಎಸ್ ಎಸ್ ಹೇಳಿದ ಹಾಗೆ ಮುಖ್ಯಮಂತ್ರಿ ಮಾತುಕೇಳಬೇಕು ಅಂತಾ ನಾವು ಹೇಳುತ್ತೇವೆ. ಕಳೆದ ನೂರು ವರ್ಷಗಳಿಂದ ಬಿಜೆಪಿಯನ್ನ ಆರ್ ಎಸ್ ಎಸ್ ನಿಯಂತ್ರಣ ಮಾಡ್ತಿದೆ ಎಂದು ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಕೈಗೊಂಬೆ ಆರೋಪಕ್ಕೆ ಸತೀಶ ತಿರುಗೇಟು ನೀಡಿದ್ದಾರೆ.
ಭಾರತ್ ಜೋಡೋ ಪಾದಯಾತ್ರೆಗೆ ನಮ್ಮ ಜಿಲ್ಲೆಯಿಂದ ಪೂರ್ವಭಾವಿ ಸಭೆ ಮಾಡಲಾಗಿದೆ. ಬಳ್ಳಾರಿ ಗ್ರಾಮೀಣ ಚಿಕ್ಕೋಡಿ ಲೋಕಸಭಾ ವ್ಯಾಪ್ತಿ, ಮೊಳಕಾಲ್ಮೂರು ಬೆಳಗಾವಿ ಲೋಕಸಭಾ ಕಾರ್ಯಕರ್ತರು ಭಾಗಿಯಾಗ್ತಾರೆ. ನಾಳೆ ಒಂದು ದಿನ ಮಾತ್ರ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿರುತ್ತಾರೆ ಎಂದು ರಾಹುಲ್ ಗಾಂಧಿಯವರು ಭಾರತ ಜೋಡೋ ಪಾದಯಾತ್ರೆ ವಿಚಾರವಾಗಿ ಹೇಳಿದರು.
PublicNext
06/10/2022 01:21 pm