ಬೆಳಗಾವಿ: ಅಧಿವೇಶನ ಸಂದರ್ಭದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತೇವೆ. ಮಾದಿಗ ಮೀಸಲಾತಿ ಹೋರಾಟವನ್ನು ಡಿಸೆಂಬರ್ 16 ರಂದು ಪ್ರತಿಭಟನೆ ಮಾಡ್ತೀವಿ ಎಂದು ಮಾಜಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳಮಿಸಲಾತಿಗೆ ಆಗ್ರಹಿಸಿ ಡಿಸೆಂಬರ್ 14ರಂದು ಎಲ್ಲಾ ಶಾಸಕರು, ಎಂಎಲ್‌ಸಿಗಳ ಮನೆ ಮುಂದೆ ತಮಟೆ ಚಳವಳಿ ಮಾಡ್ತಿದ್ದೇವೆ. ಸದನದಲ್ಲಿ ಒಳ ಮೀಸಲಾತಿಗೆ ಧ್ವನಿ ಎತ್ತುವಂತೆ ಒತ್ತಾಯ ಮಾಡಬೇಕು. ನಿನ್ನೆ ಸದನದಲ್ಲಿ ಯತ್ನಾಳ ಅವರು ಯಾಕೇ ಒಳ ಮೀಸಲಾತಿ ಮಾಡಿಲ್ಲ ಅಂತ ಪ್ರಶ್ನೆ ಮಾಡಿದ್ರು. ಇದಕ್ಕೆ ಸರ್ಕಾರದ ಪರ ಶಾಸಕರು ವಿರೋಧಿಸಿದ್ದಾರೆ. ಒಳ ಮೀಸಲಾತಿ ಹೋರಾಟ ಮೂರು ದಶಕಗಳಿಂದ ನಡೆಯುತ್ತಿದೆ. ಒಳ ಮೀಸಲಾತಿಗೆ ಒತ್ತಾಯಿಸಿ ನಮ್ಮ ಹೋರಾಟವಿದೆ. ಈ ದೇಶದ ಎಲ್ಲಾ ರಾಜ್ಯಗಳಿಗೆ ಒಳ ಮೀಸಲಾತಿ ಕೊಡುವ ಅಧಿಕಾರವಿದೆ. ರಾಜ್ಯ ಸಿಎಂ, ಗೃಹ ಸಚಿವರಿಗೆ ಹೇಳುತ್ತೇನೆ ಒಳ ಮೀಸಲಾತಿ ಜನಸಂಖ್ಯೆ ಆಧಾರದ ಮೇಲೆ ಅಲ್ಲಾ. ಶೋಷಿತರನ್ನು ಮುಖ್ಯವಾಹಿನಿಗೆ ತರುವುದಕ್ಕೆ ಒಳ ಮೀಸಲಾತಿ ಕೊಡಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗದಲ್ಲಿ ಒಳ ಮೀಸಲಾತಿಗೆ ಬೇಕಾದ ಎಲ್ಲಾ ಅಂಶಗಳಿವೆ ಎಂದರು.
ಹರಿಯಾಣ ಸರ್ಕಾರ ಘೋಷಣೆ ಮಾಡಿದಂತೆ ಒಳ ಮೀಸಲಾತಿ ನೀಡಬೇಕು. 25 ಸಾವಿರ ಜನ ಒಳ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಮಾದಾರ ಚನ್ನಯ್ಯ ಸ್ವಾಮೀಜಿ, ಗೋವಿಂದ ಕಾರಜೋಳ ಸೇರಿ ಎಲ್ಲಾ ಪಕ್ಷದ ಶಾಸಕರು, ಆಡಳಿತ ಪಕ್ಷದ ಸಚಿವರು ಭಾಗವಹಿಸಲಿದ್ದಾರೆ ಎಂದರು.
PublicNext
13/12/2024 12:54 pm