ಬೆಳಗಾವಿ: 1924ರ ಬೆಳಗಾವಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಗಮಿಸಿ ಬೆಳಗಾವಿಯಲ್ಲೆ ಇರಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆ ಶತಮಾನೋತ್ಸವ ಸಮಾರಂಭದ ಪೂರ್ವ ಭಾವಿ ಸಭೆ ನಡೆಸಿದರು. ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಗಾಂಧಿ ಬಾವಿಯಲ್ಲಿ ನೀರು ತಂದು ಚೆಲ್ಲಿ ಗೃಹಜ್ಯೋತಿ ಘೋಷಣೆ ಮಾಡಿದ್ವಿ. ನೂರು ವರ್ಷದ ಇತಿಹಾಸಕ್ಕೆ ಸಮಾವೇಶ ಸಾಕ್ಷಿಯಾಗಲಿದೆ.
150 ಜನ ಎಂಪಿಗಳು 40 ಬಿಸಿಸಿ ಅಧ್ಯಕ್ಷರುಗಳು, ಕಾಂಗ್ರೇಸ್ ಸದಸ್ಯರು ಸಿಎಂಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 26 ರಂದು ಕಾರ್ಯಕಾರಿ ಸಮೀತಿಯ ಸಭೆ ಇರುತ್ತೆ. ಮಾರನೇ ದಿನ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಇದೆ. ನಿಂತವರು, ಗೆದ್ದವರು, ಸೋತವರು ಎಲ್ಲರೂ ಸಹ ಸೇರಲಿದ್ದಾರೆ. ಸಿಪಿಎಡ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ನೂರು ಕಡೆ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟನೆ ಮಾಡಬೇಕು ಎಂದು ಸಿದ್ಧತೆ ಆಗಿದೆ.
ಸೋಮವಾರ ಅಥವಾ ಮಂಗಳವಾರ ವೇಣುಗೋಪಾಲ್ ಹಾಗೂ ಸುರ್ಜೇವಾಲ್ ಬರ್ತಿದ್ದಾರೆ. ನಮಗೆ ಅವರು ಮಾರ್ಗದರ್ಶನ ಮಾಡುತ್ತಾರೆ. ಒಬ್ಬೊಬ್ಬ ಶಾಸಕರಿಗೂ ಸಹ ಒಬ್ಬೊಬ್ಬ ನಾಯಕರುನ್ನು ಕರೆದುಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ ಎಂದರು.
ಮೈಸೂರು ದಸರಾ ಯಾವ ರೀತಿ ವಿಜೃಂಭಿಸುತ್ತೋ ಅದೇ ರೀತಿ ಲೈಟಿಂಗ್ ಅರೆಂಜ್ ಮಾಡ್ತಿವಿ. ಒಂದು ಕಡೆ ಸರ್ಕಾರ ಇನ್ನೊಂದು ಕಡೆ ಪಕ್ಷವೂ ಕೆಲಸ ಮಾಡುತ್ತೆ. ಒಂದು ವಾರಗಳ ಕಾಲ ಲೈಟಿಂಗ್ ವ್ಯವಸ್ಥೆಯನ್ನು ಇಡುತ್ತೆವೆ. ಜನ ಬಂದು ನೋಡಿಕೊಂಡು ಹೋಗಬಹುದು ಎಂದರು.
PublicNext
13/12/2024 10:42 pm