ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪ್ರತಿಭಟನೆ ವೇಳೆ ಅಸ್ವಸ್ಥರಾದ ಮೂರು ಜನ ವಿಶೇಷ ಚೇತನರು

ಬೆಳಗಾವಿ: ವಿಶೇಷ ಚೇತನರು ಸುವರ್ಣಸೌಧ ಮುತ್ತಿಗೆ ಹಾಕಲು ಹೊರಟಿದ್ದ ವೇಳೆ ಪೊಲೀಸರು ಹಾಗೂ ವಿಶೇಷ ಚೇತನರ ಮಧ್ಯೆ ತಳ್ಳಾಟ ನೂಕಾಟ ನಡೆದು ಮೂರು ಜನ ವಿಶೇಷ ಚೇತನರು ಅಸ್ವಸ್ಥರಾಗಿದ್ದಾರೆ.

ಬೆಳಗಾವಿ ಅಧಿವೇಶಕ್ಕೆ ಸಾಲು ಸಾಲು ಪ್ರತಿಭಟನೆಯ ಬಿಸಿ ತಟ್ಟಿದೆ. ಇಂದು 10ಕ್ಕೂ ಹೆಚ್ಚು ಪ್ರತಿಭಟನೆ ನಡೆದಿದ್ದು, ವಿಷೇಶ ಚೇತನರು ಹೋರಾಟ ಮಾಡಿದ್ದಾರೆ. ಪ್ರತಿದಿನ ಪ್ರತಿಭಟನೆ ವೇಳೆ ಸರ್ಕಾರದ ಪರವಾರವಾಗಿ ಮನವಿ ಸ್ವೀಕರಿಸಲು ಓರ್ವ ಸಚಿವರನ್ನು ನೇಮಕ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಮನವಿ ಸ್ವೀಕರಿಸಲು ವಿಶೇಷ ಚೇತನರ ಬಳಿ ಬಂದಾಗ. ಮೂರು ಜನರು ಅಸ್ವಸ್ಥರಾಗಿದ್ದಾರೆ. ‌

ಈ ವೇಳೆ ಪ್ರತಿಭಟನಾಕಾರರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಶೇಷ ಚೇತನರ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಆಗ್ರಹಿಸಿದರು.

ಈ ವೇಳೆ ಅಸ್ವಸ್ಥರಾಗಿದ್ದ ರವೀಂದ್ರನ ಎಂಬುವರ ಸಹಾಯಕ್ಕೆ ಧಾವಿಸಿದ ಪತ್ರಕರ್ತ ದೀಪಕ್ ಶಿಂಧೆ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.‌

Edited By : Shivu K
PublicNext

PublicNext

13/12/2024 10:04 pm

Cinque Terre

7.6 K

Cinque Terre

0

ಸಂಬಂಧಿತ ಸುದ್ದಿ