ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ರಚಿಸಲು ಒತ್ತಾಯ

ಅಥಣಿ: ಹಡಪದ ಸಮಾಜವನ್ನು 2ಎ ಗೆ ಸೇರಿಸಿ, ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಮನವಿ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ ಅವರು ಪ್ರತ್ಯೇಕ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮದ ರಚನೆ, ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಮುದಾಯ ಭವನ ನಿರ್ಮಿಸಲು ಸ್ಥಳ, ಸಮಾಜದ ಜಾತಿ ನಿಂದನೆ ತಡೆಯಲು ಅಟ್ರಾಸಿಟಿ ಕಾಯ್ದೆ, ಸಮಾಜದ ಕ್ಷೌರಿಕರಿಗೂ ಕಾರ್ಮಿಕ ಇಲಾಖೆ ಸೌಲಭ್ಯ, ಬೆಂಗಳೂರಿನಲ್ಲಿ ಪ್ರತ್ಯೇಕ ಹಾಸ್ಟೆಲ್, ಸಮಾಜದ ಶ್ರೀಗಳನ್ನು ಕಾಯಂ ಸದಸ್ಯರಾಗಿ, ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನ ಜನ್ಮಸ್ಥಳವಾದ ವಿಜಯಪುರ ಜಿಲ್ಲೆಯ ಮಸಬಿನಾಳ ಮತ್ತು ಬಾಗಲಕೋಟೆ ಜಿಲ್ಲೆ ದೇಗಿನಾಳ ಗ್ರಾಮವನ್ನು ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.

ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ, ಉಪಾಧ್ಯಕ್ಷ ಸಂತೋಷ ಹಡಪದ, ಕಾರ್ಯದರ್ಶಿ ಆನಂದ ಹಡಪದ, ಅಥಣಿ ತಾಲೂಕಾಧ್ಯಕ್ಷ ಶಿವಾನಂದ ಹುನ್ನೂರ, ಸುರೇಶ ಹಡಪದ, ಮಹಾಂತೇಶ ಹಡಪದ, ಸಾತಗೌಡ ನಾವಿ, ಮಲ್ಲೇಶ ನಾವಿ, ರಾಜು ನಾವಿ ಸೇರಿದಂತೆ ಇತರರಿದ್ದರು.

Edited By : Nagaraj Tulugeri
Kshetra Samachara

Kshetra Samachara

23/09/2022 01:05 pm

Cinque Terre

14.16 K

Cinque Terre

0

ಸಂಬಂಧಿತ ಸುದ್ದಿ