ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರಸ್ತೆಗೆ ಕತ್ತಿ ನಾಮಕರಣಕ್ಕೆ ಕಾಂಗ್ರೆಸ್ ಬಿಜೆಪಿ ಜಟಾಪಟಿ

ಬೆಳಗಾವಿ: ಇತ್ತಿಚಿಗೆ ನಿಧನರಾದ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವರಾಗಿದ್ದ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಅವರ ಹೆಸರನ್ನ ರಸ್ತೆಗೆ ಹೆಸರಿಡುವ ವಿಷಯಕ್ಕೆ ಸಂಬಂಧಿಸಿದಂತೆ ಪುರಸಭೆಯಲ್ಲಿ ಪರ ವಿರೋಧ ನಡೆದು ಗದ್ದಲ ಗಲಾಟೆ ಉಂಟಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪುರಸಭೆಯಲ್ಲಿ ನಡೆದಿದೆ.

ಸಂಕೇಶ್ವರ ಪಟ್ಟಣದ ಹಳೆ ಪಿ.ಬಿ ರಸ್ತೆಗೆ ಇತ್ತೀಚಿಗೆ ಅಕಾಲಿಕ ನಿಧನರಾದ ದಿವಂಗತ ಉಮೇಶ ಕತ್ತಿ ಅವರ ಹೆಸರಿಡುವ ಸಂಬಂಧದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪರ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಣಯವನ್ನ ಮುಂದೂಡಲಾಯಿತು.

ಪುರಸಭೆಯ ಅಧ್ಯಕ್ಷೆ ಸೀಮಾ ಹತನೂರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಹಳೆ ಪಿ.ಬಿ ರಸ್ತೆಗೆ ದಿವಂಗತ ಉಮೇಶ ಕತ್ತಿ ಅವರ ಹೆಸರು ನಾಮಕರಣದ ಕುರಿತು ಚರ್ಚೆಗೆ ಕಾಂಗ್ರೆಸ್‌ ಸದಸ್ಯರಾದ ಜಿತೇಂದ್ರ ಮರಡಿ ವಿರೋಧ ವ್ಯಕ್ತಪಡಿಸಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡಿರುವ ದಿ. ಅಪ್ಪಣ್ಣಗೌಡ ಪಾಟೀಲ ಹೆಸರು ಇನ್ನೂವರೆಗೂ ಯಾವ ಸ್ಥಳಗಳಿಗೂ ಹೆಸರಿಟ್ಟಿಲ್ಲ, ಮತ್ತು ಮಾಜಿ ಸಚಿವ ಮಲ್ಹಾರಿಗೌಡ ಪಾಟೀಲ ಮತ್ತು ಮಾಜಿ ಶಾಸಕ ಬಾಳಾಸಾಹೇಬ ಸಾರವಾಡಿ ಅವರ ಕೊಡುಗೆಯು ಸಹ ಇದೆ ಅವರಿಗೂ ಸಹ ಗೌರವ ಕೊಡುವ ನಿಟ್ಟಿನಲ್ಲಿ ಅವರ ಹೆಸರಿಡುವ ಕೆಲಸ ಆಗಬೇಕು ಆಗ್ರಹಿಸಿದರು.

ಬಿಜೆಪಿ ಸದಸ್ಯ ಅಮರ ನಲವಡೆ‌ ಮಧ್ಯ ಪ್ರವೇಶಿಸಿ ಅವರುಗಳ ಹೆಸರು ಸಹ ಮುಖ್ಯ ರಸ್ತೆಗಳಿಗೆ ಹೆಸರಿಡುವ ಕೆಲಸ ಮಾಡಲಾಗುವುದು ಎಂದರು. ನಂತರ ಜಿತೇಂದ್ರ ಮರಡಿ ಮಾತನಾಡಿ ಈ ವಿಷಯದ ಚರ್ಚೆಯನ್ನು ಮುಂದಕ್ಕೆ ಹಾಕಿ ಸೂಕ್ತ ತೀರ್ಮಾನ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು .

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಅಜಿತ ಕರಜಗಿ, ಮುಖ್ಯಾಧಿಕಾರಿ ರಾಜಶೇಖರ ಚೌಗಲಾ, ಅಭಿಯಂತರ ಗಡಾದ, ಸದಸ್ಯರಾದ ಸಂಜಯ ಶಿರಕೋಳಿ ಸೇರಿದಂತೆ ಇತರರು ಇದ್ದರು.

Edited By : Shivu K
PublicNext

PublicNext

23/09/2022 11:29 am

Cinque Terre

20.57 K

Cinque Terre

2

ಸಂಬಂಧಿತ ಸುದ್ದಿ