ಬೆಳಗಾವಿ: ಹೀಗೆ ರಸ್ತೆಯ ಬ್ರಿಡ್ಜ್ ಮೇಲೆ ಕುಳಿತುಕೊಂಡು ತಮ್ಮ ಕ್ಷೇತ್ರದ ಶಾಸಕಿಗೆ ಧಿಕ್ಕಾರ ಕೂಗೂತ್ತಾ ನಮಗೆ ನ್ಯಾಯ ಬೇಕು ಎಂದು ಪ್ರತಿಭಟನೆ ಗ್ರಾಮಸ್ಥರು. ಸೇತುವೆ ಮೇಲೆ ಬಿದ್ದಿರುವ 10 ಅಡಿ ತಗ್ಗು ಗುಂಡಿಯನ್ನು ಶಾಲಾ ಮಕ್ಕಳು ಇಣುಕಿ ನೋಡುತ್ತಿರುವ ದೃಶ್ಯಗಳು. ಬೈಕ್ ಸವಾರರು ಸೇರಿದಂತೆ ಅನೇಕ ವಾಹನಗಳ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿರುವ ಪ್ರಯಾಣಿಕರು, ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದು ಹದಗೆಟ್ಟು ಹೋದ ಸೇತುವೆ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ.
ಹೌದು. ಸತತವಾಗಿ ಸುರಿದ ಮಳೆಗೆ ಪಾರಿಶ್ವಾಡ ಮಲಪ್ರಭಾ ಸೇತುವೆ ಮೇಲೆ ಹೀಗೆ ಆಳ ಉದ್ದ ತಗ್ಗು ಗುಂಡಿಗಳು ಬಿದ್ದು, ಕೆಟ್ಟು ಹೋಗಿದೆ. ಹೀಗಿದ್ದರೂ ಇದುವರಿಗೂ ಯಾವ ಒಬ್ಬ ಸ್ಥಳೀಯ ಅಧಿಕಾರಿಗಳು ಬಂದಿಲ್ಲ ಎಂಬ ಆರೋಪ ಮತ್ತು ಶಾಸಕಿ ಈ ಗ್ರಾಮಕ್ಕೆ ಇದುವರೆಗೂ ಬಾರದೆ ತಮ್ಮ ಅಳಲು ಕೇಳಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಈ ನಮ್ಮ ಪ್ರತಿಭಟನೆ, ಕೂಡಲೇ ಸೇತುವೆ ದುರಸ್ತಿಗೊಳ್ಳದಿದ್ದರೆ ಈ ಬಾರಿ ಚುನಾವಣಾ ಬಹಿಷ್ಕಾರ ಹಾಕುತ್ತವೆ ಎಂದು ಕಿಡಿಕಾರಿದ್ದಾರೆ.
ಹೀಗೆ ಸೇತುವೆ ಮೇಲೆ ಬೃಹತ್ತಾದ ತಗ್ಗು ಗುಂಡಿಗಳು ಬಿದ್ದಿರುವ ಕಾರಣ ಕಳೆದ ಮೂರು ದಿನಗಳಿಂದ ಇಲ್ಲಿ ಬಸ್, ಸಂಚಾರ ಸ್ಥಗೀತವಾಗಿ ಮಕ್ಕಳು ಶಾಲೆಗೆ ಹೋಗದೆ ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ಈ ಸೇತುವೆ ಪಕ್ಕದ ಹಳ್ಳಿಗಳಾದ ಅವರೊಳ್ಳಿ, ಚಿಕ್ಕಮುನವಳ್ಳಿ, ಹಿರೆಮುನವಳ್ಳಿ ಸೇರಿದಂತೆ ಅಳ್ನಾವರ ಪಟ್ಟಣಕ್ಕೂ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಇದೀಗ ಸಂಪರ್ಕ ಕಡಿತವಾಗಿದ್ದರಿಂದ ಗರ್ಭಿಣಿಯರು, ರೋಗಿಗಳಿಗೆ ಕೂಡ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಪರದಾಡುವಂತಾಗಿದೆ. ಆದ್ದರಿಂದ ಕೂಡಲೆ ಸೇತುವೆ ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಕ್ಷೇತ್ರದ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಇದೀಗ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
PublicNext
16/09/2022 01:30 pm