ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ದನದ ಕೊಟ್ಟಿಗೆ ಸೇರಿದ್ದ ಬೃಹತ್‌ ಗಾತ್ರದ ಹಾವು ಸೆರೆ

ಬೆಳಗಾವಿ: ದನದ ಕೊಟ್ಟಿಗೆ ಸೇರಿದ್ದ ಬೃಹತ್ ಗಾತ್ರದ ಹಾವುನ್ನು ಸೇರೆ ಹಿಡಿದು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ಹೊರವಲಯದಲ್ಲಿ ನಡೆದಿದೆ‌.

ಗೋಟುರ ಗ್ರಾಮದ ಹೊರವಲಯದ ನಾಗಪ್ಪ ಮನ್ನಿಕೇರಿ ಎಂಬುವರ ಮನೆ ಪಕ್ಕದ ದನದ ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ ಹಾವುನ್ನು ಕಂಡ ಮನೆಯ ಮಾಲೀಕ ಕೂಡಲೇ ಸ್ಥಳೀಯ ಉರಗ ತಜ್ಞ ನೇತಾಜಿ ಅವರನ್ನು ಕರೆಸಿದ್ದಾರೆ. ಸ್ಥಳಕ್ಕೆ ಬಂದ ನೇತಾಜಿ ಅವರು ಹಾವುನ್ನ ಸೇರೆ ಹಿಡಿದು ರಕ್ಷಣೆ ಮಾಡಿದ್ದಾರೆ. ಹಾವು ದನದ ಕೊಟ್ಟಿಗೆ ಸೇರಿದ್ದರಿಂದ ಆತಂಕಗೊಂಡಿದ್ದ ನಾಗಪ್ಪ ಮನ್ನಿಕೇರಿ ಕುಟುಂಬಸ್ಥರು ಸದ್ಯ ನಿರಾಳರಾಗಿದ್ದಾರೆ.

Edited By : Shivu K
Kshetra Samachara

Kshetra Samachara

10/10/2022 08:21 am

Cinque Terre

23.16 K

Cinque Terre

0

ಸಂಬಂಧಿತ ಸುದ್ದಿ