ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಎತ್ತಿನ ಓಟಗಳ ಸ್ಪರ್ಧೆಯಲ್ಲಿ ಬೆಳಗಾವಿಯ ಕೀರ್ತಿ ಪತಾಕೆಯನ್ನು ಹಾರಿಸಿದ್ದ ನಾಗ್ಯಾ ಖ್ಯಾತಿಯ ಎತ್ತು ಸಾವಿಗೀಡಾಗಿದ್ದು, ಶೋಕ ವ್ಯಕ್ತವಾಗಿದೆ.
ಕಳೆದ 21 ವರ್ಷಗಳಿಂದ ನಾಗ್ಯಾ ಹೆಸರಿನ ಎತ್ತು ತನ್ನ ಜೀವನದ ಮೊದಲ ಓಟವನ್ನು ಅನಗೋಳದಿಂದ ಆರಂಭಿಸಿತ್ತು.
ಈ ಮೊದಲು ಷರತ್ತಿನಲ್ಲಿ ಅಂದ್ರೆ ಎತ್ತಿನ ಓಟದಲ್ಲಿ ಮೊದಲ ಸ್ಥಾನ ಪಡೆದಿದ್ದ ನಾಗ್ಯಾ ಆ ನಂತರ ಹಿಂದಿಬಿದ್ದ ಉದಾಹರಣೆಯೇ ಇಲ್ಲ.
ನಾಗ್ಯಾ ಇದುವರೆಗೂ ಬರೋಬ್ಬರಿ 500ಕ್ಕೂ ಹೆಚ್ಚು ಷರತ್ತುಗಳಲ್ಲಿ ಗೆದ್ದು ಹಿಂದು ಕೇಸರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಇನ್ನು ನಾಗ್ಯಾ ಷರತ್ತಿನಲ್ಲಿ ಭಾಗವಹಿಸಿದ್ದಾನೆ ಅಂತ ಗೋತ್ತಾದ್ರೆ ಸಾಕು ಸುತ್ತೂರಿನ ಜನ ಷರತ್ತು ನೋಡಲು ಆಗಮಿಸುತ್ತಿದ್ರು, ಆದ್ರೆ ವಿಧಿಯಾಟ ಸಾಕಷ್ಟು ಜನಪ್ರೀಯತೆ ಪಡೆದುಕೊಂಡಿದ್ದ ನಾಗ್ಯಾ ಸದ್ಯ ಜೀನವದ ಓಟಕ್ಕೆ ವಿದಾಯ ಹೇಳಿದ್ದಾನೆ. ಇದು ಷರತ್ತು ಪ್ರೇಮಿಗಳಿಗೆ ನುಂಗಲಾರದ ತುತ್ತಾಗಿದೆ.
ಒಟ್ಟಾರೆಯಲ್ಲಿ ನಾಗ್ಯಾ ಇನ್ನಿಲ್ಲ ಎನ್ನುವ ಸುದ್ದಿ ಪಾಖರೆ ಮನೆತನಕ್ಕೆ ಮಾತ್ರವಲ್ಲದೇ ಲಕ್ಷಾಂತರ ರೈತರ ಕಣ್ಣೀರಿಗೆ ಕಾರಣವಾಗಿದೆ.
PublicNext
20/09/2022 07:40 pm