ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 'ರೈತ ಗ್ರಾಹಕರ ವಿರೋಧಿ ವಿದ್ಯುತ್‌ ತಿದ್ದುಪಡೆ ಮಸೂದೆ ಕಾಯ್ದೆ ಜಾರಿಗೆ ಬೇಡ'

ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ ಕಾಯ್ದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕಿತ್ತೂರು ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ತಾಲೂಕು ಘಟಕದ ಅಧ್ಯಕ್ಷ ಮುಸ್ತಾಕ ಸಯ್ಯದ್ ಮಾತನಾಡಿ, ರೈತ ಗ್ರಾಹಕರ ವಿರೋಧಿ ವಿದ್ಯುತ್‌ ತಿದ್ದುಪಡೆ ಮಸೂದೆ ಕಾಯ್ದೆ ಜಾರಿಗೆ ತರಬಾರದು. ತಕ್ಷಣ ರೈತರಿಗೆ ಮಳೆ ಹಾನಿ ಪರಿಹಾರ ನೀಡಬೇಕು ಹಾಗೂ ಎಂ. ಎಸ್ ಪಿ ಕಾನೂನುಬದ್ಧಗೊಳಿಸಲು ನಿರಂತರ ಖರೀದಿ ಕೇಂದ್ರ ತೆರೆಯಬೇಕು ಮತ್ತು ಕಬ್ಬಿನ ಬಾಕಿ ಹಣ ರೈತರಿಗೆ ನೀಡಬೇಕು ಹಾಗೂ ಒಂದು ಟನ್ ಕಬ್ಬಿಗೆ ಕನಿಷ್ಠ 5,000 ರೂ. ಹಣ ನೀಡಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಎಲ್ಲಾ ತಾಲೂಕ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿದ್ದೇವೆ ಎಂದರು.

ಈ ವರ್ಷ ಕಳೆದ ವರ್ಷಗಳಿಗಿಂತ ಶೇಕಡ 40ರಷ್ಟು ಹೆಚ್ಚಿಗೆ ಮಳೆಯಾಗಿ, 9 ಲಕ್ಷ ಹೆಕ್ಟೇರ್ ಬೆಳನಾಶ ಆಗಿದೆ. 5 ಸಾವಿರ ಕೋಟಿ ರೂಪಾಯಿ ನಷ್ಟ ಆಗಿದೆ. ರೈತ ಬೆಳೆದ ಉತ್ಪನ್ನಗಳನ್ನು ನಿರಂತರವಾಗಿ ವರ್ಷವಿಡೀ ಖರೀದಿಸಬೇಕು ಆಗ್ರಹಿಸಿದರು.

ಪುಂಡಲೀಕ ಶಿದಗೇರಿ, ವೀರಭಂದ್ರ ತುರಮರಿ, ಮೋಹನ ಬಡಿಗೇರ, ಸುಭಾಸ ಗಿಡ್ಡನವರ, ಮಲೇಶಪ್ಪ ಶಿವಪೂಜಿ, ಬೀಮಪ್ಪ ದುರ್ಗದ, ಗಂಗಾಧರ ತಿಗಡಿ, ಬಸವರಾಜ ದುರ್ಗದ, ರಾಮಪ್ಪ ಮಡಿವಾಳರ, ಫಕೀರಪ್ಪ ಪ್ಯಾಟಿ, ಅಶೋಕ ಕುಗಟಿ, ಬಾಳಪ್ಪ ದುರ್ಗದ ಸೇರಿ ಹಲವು ರೈತರು ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

12/09/2022 06:19 pm

Cinque Terre

12.96 K

Cinque Terre

0

ಸಂಬಂಧಿತ ಸುದ್ದಿ