ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಜನಮನ ಸೆಳೆದ ಹಾನಗಲ್ ಕುಮಾರಸ್ವಾಮಿ ಭಾವಚಿತ್ರದ ಮೆರವಣಿಗೆ

ಚಿಕ್ಕೋಡಿ: ಹಾನಗಲ್ ಕುಮಾರಸ್ವಾಮಿಯವರ 155 ನೇ ಜಯಂತಿ ಪ್ರಯುಕ್ತ ಕುಮಾರ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಸಮಾರೋಪದ ಕಾರ್ಯಕ್ರಮ ಹಿನ್ನೆಲೆಯಲ್ಲಿ, ಚಿಕ್ಕೋಡಿ ಪಟ್ಟಣದಾದ್ಯಂತ ಹಾನಗಲ್ ಕುಮಾರಸ್ವಾಮಿಯವರ ಭಾವಚಿತ್ರ ಮೆರವಣಿಗೆಯು ಅದ್ಧೂರಿಯಾಗಿ ಜರುಗಿತು.

ಚಿಕ್ಕೋಡಿ ಪಟ್ಟಣದ ಕೆ.ಸಿ.ರಸ್ತೆಯ ಮೂಲಕ ಪ್ರಾರಂಭವಾದ ಮೆರವಣಿಗೆಯು ರವಿವಾರ ಪೇಠ, ಗುರುವಾರ ಪೇಠ, ಶ್ರೀ ಕೃಷ್ಣ ವೃತ್ತದ, ಬಸವೇಶ್ವರ ವೃತ್ತ ಮಾರ್ಗವಾಗಿ ಸಿ ಎಲ್ ಇ ಸಂಸ್ಥೆಯ ಪ್ರವಚನ ಕಾರ್ಯಕ್ರಮದ ವೇದಿಕೆವರೆಗೆ ಸಾಗಿತು. ಮೆರವಣಿಗೆಯಲ್ಲಿ ಭಾರೀ ಪ್ರಮಾಣದಲ್ಲಿ ಜನ ಭಾಗಿಯಾಗಿದ್ದರು.

ಸಕಲವಾದ್ಯ ಮೇಳದೊಂದಿಗೆ,ಸಾವಿರಾರು ಸುಮಂಗಲಿಯರ ಕುಂಭಮೇಳದೊಂದಿಗೆ ಹಾಗೂ ಗ್ರಂಥಗಳ ಸಮೇತ ಮೆರವಣಿಗೆ ಸಾಗಿತು. ಇನ್ನೂ ಮೆರವಣಿಗೆಯ‌ ಉದ್ದಕೂ ಹಾನಗಲ್ ಕುಮಾರಸ್ವಾಮಿಯವರ ಭಾವಚಿತ್ರಕ್ಕೆ ಭಕ್ತರು ಹೂವನ್ನು ಅರ್ಪಿಸಿ ಭಕ್ತಿಯ ಪರಾಕಾಷ್ಠೆಯನ್ನು ತೋರಿದರು.

ಮೆರವಣಿಗೆಯಲ್ಲಿ ಡಾ. ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ, ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಆಡಿ-ಹಂದಿಗುಂದ ಸಿದ್ದೇಶ್ವರ ವಿರಕ್ತಮಠದ ಶಿವಾನಂದ ಶ್ರೀ. ಚಿಂಚಣಿ ಸಿದ್ಧ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

22/09/2022 03:27 pm

Cinque Terre

15.9 K

Cinque Terre

1

ಸಂಬಂಧಿತ ಸುದ್ದಿ