ಬೆಳಗಾವಿ: ಖಾನಾಪುರದ ದುರ್ಗಾಮಾತಾ ದೌಡ್‌ನಲ್ಲಿ ಡಾ ಸೋನಾಲಿ ಸರ್ನೋಬತ್ ಭಾಗವಹಿಸಿ ಹಾಲು ಮತ್ತು ಬೆಚ್ಚಗಿನ ನೀರಿನಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಅಭಿಷೇಕ ಮಾಡಲಾಯಿತು. ಎಲ್ಲಾ ಧಾರಕಿಯರು ಸುಂದರವಾದ ಕೇಸರಿ ಪೇಟವನ್ನು ಧರಿಸಿದ್ದರು. ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಕೇಸರಿ ಧ್ವಜಕ್ಕೆ ಪೂಜೆ ಸಲ್ಲಿಸಿ ಶಿವಸ್ಮಾರಕ ದೌಡ್‌ಗೆ ಚಾಲನೆ ನೀಡಲಾಯಿತು.
ಖಾನಾಪುರದ ಶಿವಸ್ಮಾರಕದಿಂದ ಆರಂಭವಾಗಿ ಹತ್ತರಗುಂಜಿಯಲ್ಲಿ ಸಮಾರೋಪಗೊಂಡಿತು. ಸಾವಿರಾರು ಮಕ್ಕಳು, ಹುಡುಗಿಯರು, ಹುಡುಗರು ಹೀಗೆ ಎಲ್ಲಾ ವಯೋಮಾನದವರು ಭಾಗವಹಿಸಿದ್ದರು.
ವರದಿ: ನಾಗೇಶ್ ನಾಯ್ಕರ
PublicNext
02/10/2022 10:46 pm