ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬೈಲಹೊಂಗಲದಲ್ಲಿ ದುರ್ಗಾ ಮಾತಾ ದೌಡ್ ಸಂಭ್ರಮ

ಬೈಲಹೊಂಗಲ: ಪಟ್ಟಣದ ಜವಳಿ ಕೂಟದ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ಶಾಖಾ ಮೂರು ಸಾವಿರಮಠದ ಪ್ರಭು ನೀಲಕಂಠ ಶ್ರೀಗಳು ಪೂಜೆ ಸಲ್ಲಿಸಿ ದುರ್ಗಾ ಮಾತಾ ದೌಡ್ ಸಂಭ್ರಮಕ್ಕೆ ಚಾಲನೆ ನೀಡಿದರು.

ಈ ದೌಡ್‌ನಲ್ಲಿ ನೂರಾರು ಯುವಕರು ಶ್ವೇತ ವಸ್ತ್ರಧರಿಗಳಾಗಿ ಕೈಯಲ್ಲಿ ಖಡ್ಗ ಹಿಡಿದು ಪಾಲ್ಗೊಂಡರು. ಮಹಿಳೆಯರು ತಿಲಕ ಇಟ್ಟು ಆರತಿ ಬೆಳಗಿದ ತಕ್ಷಣ ಕಾರ್ಯಕ್ರಮ ಆರಂಭವಾಯಿತು. ದೌಡ್ ಗ್ರಾಮದೇವತೆ ದೇವಸ್ಥಾನದಿಂದ ಮೂರುಸಾವಿರ ಮಠ ಡಮ್ಮನಗಿ ಗಲ್ಲಿ ಗುಂಡ್ಲುರ ಚಾಳ ಗೊಂಬಿ ಗೂಡಿ ಮಾರ್ಗವಾಗಿ ಅಂಬೇಡ್ಕರ್ ನಗರದ ಗಾಳಿ ದುರ್ಗಾದೇವಿ ದೇವಸ್ಥಾನ ತಲುಪಿತು.

ಈ ಸಂದರ್ಭದಲ್ಲಿ ವಿ.ಹಿಂ.ಪ ತಾಲೂಕು ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಅಶೋಕ ಸವದತ್ತಿ, ಬಾಬು ಕುಡಸೋಮನ್ನವರ, ಬಸವರಾಜ ಜನ್ಮಟ್ಟಿ, ಶಿವಾನಂದ ಬಡ್ಡಿಮನಿ, ಆದಿತ್ಯ ವಿಶ್ವನಾಥ ಪಾಟೀಲ, ಮಡಿವಾಳಪ್ಪ ಹೋಟಿ, ರವಿ ಹುಲಕುಂದ, ಸುಭಾಸ್ ತುರಮರಿ, ನಾರಾಯಣ ನಲವಡೆ ನೂರಾರು ಯುವಕರು ಪಾಲ್ಗೊಂಡಿದ್ದರು.

Edited By : Vijay Kumar
Kshetra Samachara

Kshetra Samachara

27/09/2022 12:18 pm

Cinque Terre

4.2 K

Cinque Terre

0

ಸಂಬಂಧಿತ ಸುದ್ದಿ