ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹುಡುಗಿ ವಿಚಾರದಲ್ಲಿ ಕ್ಯಾತೆ ತೆಗೆದು ಗಣೇಶ ವಿಸರ್ಜನೆ ವೇಳೆ ಯುವಕನ ಕೊಲೆ

ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಕಾಲೇಜ ಯುವಕರ ಗುಂಪುಗಳ ನಡುವೆ ಜಗಳವಾಗಿದೆ. ಈ ಜಗಳ ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಿನ್ನೆ 11 ದಿನಗಳ ಗಣೇಶ ವಿಸರ್ಜನೆ ಮಾಡುವ ವೇಳೆ ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಅನ್ನುವಷ್ಟರಲ್ಲಿ, ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಈ ಜಗಳ, ಗಲಾಟೆಯಾಗಿ ತಿರುಗಿ ಕೊನೆಗೆ ಅರ್ಜುನ ಪಾಟೀಲ ಎಂಬ ವಿದ್ಯಾರ್ಥಿಯ ಕೊಲೆಯಾಗುವ ಹಂತಕ್ಕೆ ತಲುಪಿದೆ.

ಗಲಾಟೆಯಲ್ಲಿ 21 ವರ್ಷದ ಅರ್ಜುನ್ ಪಾಟೀಲ ಎಂಬ ಯುವಕನಿಗೆ ದುಷ್ಕರ್ಮಿಗಳು ಹೊಟ್ಟೆಯ ಬಲಬದಿಗೆ ಚೂರಿ ಹಾಕಿ ಪರಾರಿಯಾಗಿದ್ದಾರೆ. ತೀವ್ರವ ರಕ್ತಸ್ರಾವದಿಂದ ಬಳಲುತ್ತಿದ್ದ ಅರ್ಜುನ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಬಲ್ಲ ಮೂಲಗಳ ಪ್ರಕಾರ ಈ ಗಲಾಟೆ ಮತ್ತು ಕೊಲೆ ಕಾಲೇಜು ಯುವಕರ ಪ್ರೀಪ್ಲ್ಯಾನ್ ಆಗಿತ್ತು ಎನ್ನಲಾಗಿದೆ. ಹುಡಗಿಯ ವಿಷಯಕ್ಕೆ ಈ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಮುಗಳಿಹಾಳ ಪೊಲೀಸರು ತನಿಖೆ ನಡೆಸಿ ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ.

ಉದಯ ಬಂದ್ರೊಳ್ಳಿ (21), ವಿಠ್ಠಲ ಮೀಶಿ (21), ಸುಭಾಷ ಸೋಲನ್ನವರ ಹಾಗೂ ಇನ್ನೋರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂಜೀವ ಪಾಟೀಲ ತಿಳಿಸಿದ್ದಾರೆ.

Edited By : Manjunath H D
PublicNext

PublicNext

11/09/2022 12:07 pm

Cinque Terre

51.11 K

Cinque Terre

3

ಸಂಬಂಧಿತ ಸುದ್ದಿ