ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ:‌ ಡಬಲ್ ಮರ್ಡರ್ ಪ್ರಕರಣ; ಇಬ್ಬರು ಪೊಲೀಸರ ಅಮಾನತು

ಬೆಳಗಾವಿ:‌ ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.

ಮಾರಿಹಾಳ ಪೊಲೀಸ್ ಠಾಣೆಯ ಮುಖ್ಯಪೇದೆ ಬಿ.ಎಸ್.ಬಳಗಣ್ಣವರ್, ಪೇದೆ ಆರ್.ಎಸ್.ತಳೇವಾಡೆ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ಹೌದು! ಅಕ್ಟೋಬರ್ 6ರಂದು ರಾತ್ರಿ ಬೆಳಗಾವಿಯ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಎರಡು ಗ್ಯಾಂಗ್ ಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಮಾರಾಮಾರಿಯಲ್ಲಿ ಮಹೇಶ್ ಮುರಾರಿ, ಪ್ರಕಾಶ್ ಹುಂಕರಿ ಪಾಟೀಲ್ ಎಂಬ ಇಬ್ಬರು ಯುವಕರ ಹತ್ಯೆಯಾಗಿತ್ತು!

ಆದರೆ, ಈ ಘಟನೆಗೂ ಮುನ್ನ ದಿನವೇ ಈ ಗ್ಯಾಂಗ್ ಗಳ ನಡುವೆ ಗಲಾಟೆಯಾಗಿತ್ತು. ಈ ವಿಚಾರ ಈ ಇಬ್ಬರು ಪೇದೆಗಳಿಗೆ ಗೊತ್ತಿದ್ರೂ ಮೇಲಾಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ತೋರಿದ್ದರು. ಹೀಗಾಗಿ ಕರ್ತವ್ಯ ಲೋಪಕ್ಕೆ ಈ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಸಿಟಿ ಪೊಲೀಸ್ ಕಮಿಷನರ್ ಡಾ ಬೋರಲಿಂಗಯ್ಯ ತಿಳಿಸಿದ್ದಾರೆ.

Edited By : Manjunath H D
PublicNext

PublicNext

08/10/2022 04:09 pm

Cinque Terre

26.72 K

Cinque Terre

1

ಸಂಬಂಧಿತ ಸುದ್ದಿ