ಬೆಳಗಾವಿ: ಅದು ಐತಿಹಾಸಿಕ ಲಕ್ಷ್ಮೀ ದೇವಿ ದೇವಸ್ಥಾನ ಇರುವ ಸುಕ್ಷೇತ್ರ. ಆ ಸುಕ್ಷೇತ್ರದಲ್ಲಿ ರಾತ್ರೋರಾತ್ರಿ ನೆತ್ತರು ಹರಿದಿತ್ತು. ಇಬ್ಬರು ಯುವಕರು ಬರ್ಬರ ಹತ್ಯೆ ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು. ಅಷ್ಟಕ್ಕೂ ಆ ಊರಿನಲ್ಲಿ ರಾತ್ರೋರಾತ್ರಿ ಇಬ್ಬರ ಹೆಣ ಬೀಳಲು ಕಾರಣ ಏನು? ಕೊಲೆಯಾದವರು ಯಾರು? ಅವರ ಹಿನ್ನೆಲೆ ಏನು? ಸೋಷಿಯಲ್ ಮೀಡಿಯಾದಲ್ಲಿ ಅವರ ಹವಾ ಹೇಗಿತ್ತು ಗೊತ್ತಾ.. ಈ ಸ್ಟೋರಿ ನೋಡಿ..
ಹೌದು.. ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮ ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಸುಳೇಭಾವಿಯ ಗ್ರಾಮದ ಲಕ್ಷ್ಮೀ ಗಲ್ಲಿಯಲ್ಲಿ ಇಬ್ಬರನ್ನು ಮುಖದ ಗುರುತು ಸಿಗದ ಹಾಗೇ ಕೊಚ್ಚಿ ಹತ್ಯೆಗೈಯಲಾಗಿತ್ತು. ರಣಧೀರ ಅಲಿಯಾಸ್ ಮಹೇಶ್ ರಾಮಚಂದ್ರ ಮುರಾರಿ(26), ಪ್ರಕಾಶ್ ಹುಂಕರಿ ಪಾಟೀಲ್ (24) ಹತ್ಯೆಗೈದು ಹಂತಕರು ಪರಾರಿಯಾಗಿದ್ರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವೈಯಕ್ತಿಕ ದ್ವೇಷ ಹಿನ್ನೆಲೆ ಹತ್ಯೆಗೈದ ಅನುಮಾನದ ಮೇಲೆ ಸದ್ಯ ಮಾರಿಹಾಳ ಪೊಲೀಸರು ಆರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, 'ಪ್ರಕರಣ ಸಂಬಂಧ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ನಿನ್ನೆ ರಾತ್ರಿ 8:45ರಿಂದ 9 ಗಂಟೆಯ ಮಧ್ಯೆ 6ರಿಂದ 7 ಜನರ ತಂಡ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾನು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಯುತ್ತಿದೆ. ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್, ಮಾರಿಹಾಳ ಸಿಪಿಐ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಪ್ರಕಾಶ್ ಪಾಟೀಲ್, ಮಹೇಶ್ ಮುರಾರಿ ಹತ್ಯೆಗೈಯ್ಯಲಾಗಿದೆ. ವಶಕ್ಕೆ ಪಡೆದ ಆರು ಜನರು ಅದೇ ಊರಿನವರು ಒಂದೇ ಸಮುದಾಯಕ್ಕೆ ಸೇರಿದವರು. ಇನ್ನು ಕೊಲೆಯಾದ ಮಹೇಶ್ ಮುರಾರಿ ಈ ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಗೋಕಾಕ್‌ನ ನಟೋರಿಯಸ್ ಟೈಗರ್ ಗ್ಯಾಂಗ್ ಜೊತೆ ಲಿಂಕ್ ಇತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಇನ್ನು ಕೊಲೆಯಾದ ಮಹೇಶ್ ಮುರಾರಿ ಅಲಿಯಾಸ್ ರಣಧೀರ, ಪ್ರಕಾಶ್ ಪಾಟೀಲ್ ಅಲಿಯಾಸ್ ಡಾಲಿ ಊರಿನಲ್ಲಿ ಗುಂಪು ಕಟ್ಟಿಕೊಂಡು ಹವಾ ಮೆಂಟೇನ್ ಮಾಡ್ತಿದ್ದರಂತೆ. ರೌಡಿಸಂ ಹಿನ್ನೆಲೆಯ ಚಿತ್ರಗಳಿಂದ ಪ್ರಭಾವಿತರಾಗಿ ಇನ್‌ಸ್ಟಾಗ್ರಾಂನಲ್ಲಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಫಿಲ್ಮ್ ಡೈಲಾಗ್‌ಗಳ ರೀಲ್ಸ್ ಸಹ ಮಾಡುತ್ತಿದ್ರು. ಕೆಲವು ತಿಂಗಳ ಹಿಂದೆ ಸ್ನೇಹಿತರ ಮಧ್ಯೆಯೇ ಎರಡು ಗುಂಪುಗಳಾಗಿ ಎರಡು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದ್ದು ಈ ವೇಳೆ ಕೊಲೆಯಾದ ಪ್ರಕಾಶ್ ಪಾಟೀಲ್ ಓರ್ವನಿಗೆ ಬೆದರಿಕೆ ಹಾಕಿದ್ದನಂತೆ. ಇದೇ ದ್ವೇಷ ಇಟ್ಟುಕೊಂಡು ಇಬ್ಬರ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಮುಂದುವರಿದಿದೆ. ಈ ಬಗ್ಗೆ ಕೊಲೆಯಾದ ಮಹೇಶ ತಂದೆ ಹೇಳೋದು ಹೀಗೆ.
PublicNext
07/10/2022 11:05 pm